Advertisement

ನಿಮ್ಮ ಉಗ್ರರು, ನಮ್ಮ ಉಗ್ರರು ಎಂಬ ಯುಗಕ್ಕೆ ಮರಳುವುದು ಬೇಡ: ವಿಶ್ವಸಂಸ್ಥೆಗೆ ಭಾರತ ಎಚ್ಚರಿಕೆ

07:08 PM Jul 07, 2021 | Team Udayavani |

ವಿಶ್ವಸಂಸ್ಥೆ: 9/11ರ ಉಗ್ರರ ದಾಳಿಯ 20 ವರ್ಷಗಳ ಬಳಿಕ, ಭಯೋತ್ಪಾದನೆಗೆ ಬೇರೆ ಬೇರೆ ವ್ಯಾಖ್ಯಾನ ನೀಡುವ ಪ್ರಯತ್ನ ನಡೆದಿದ್ದು, ಕೂಡಲೇ ಇಂಥ ಪ್ರಯತ್ನಕ್ಕೆ ಕೊನೆ ಹಾಡಬೇಕು ಎಂದು ವಿಶ್ವಸಂಸ್ಥೆಗೆ ಭಾರತ ಖಡಕ್‌ ಎಚ್ಚರಿಕೆ ನೀಡಿದೆ.

Advertisement

ಭಯೋತ್ಪಾದನೆಗೆ “ಹಿಂಸಾತ್ಮಕ ರಾಷ್ಟ್ರೀಯವಾದ’, “ಬಲಪಂಥೀಯ ಭಯೋತ್ಪಾದನೆ’ ಎಂಬಿತ್ಯಾದಿ ಪದನಾಮಗಳನ್ನು ಇತ್ತೀಚೆಗೆ ನೀಡಲಾಗುತ್ತಿದೆ. ಜಗತ್ತು ಈ ರೀತಿಯಾದ “ನಿಮ್ಮ ಭಯೋತ್ಪಾದಕರು’ ಮತ್ತು “ನಮ್ಮ ಭಯೋತ್ಪಾದಕರು’ ಎಂಬ ಯುಗದತ್ತ ಮರಳಬಾರದು. ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂವಾದದ ವೇಳೆ ಅಲ್ಲಿರುವ ಭಾರತೀಯ ಕಾಯಂ ರಾಯಭಾರಿ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ :ಮೋದಿ ಸಂಪುಟ ಪುನರ್ ರಚನೆ : ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪ್ರಮಾಣ ವಚನ ಸ್ವೀಕಾರ

ಭಯೋತ್ಪಾದನೆಯ ಅಪಾಯವು ಅತ್ಯಂತ ಗಂಭೀರ ಹಾಗೂ ಸಾರ್ವತ್ರಿಕವಾದದ್ದು. ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳ ಸಾಮೂಹಿಕ ಪ್ರಯತ್ನದಿಂದ ಮಾತ್ರವೇ ಅದನ್ನು ಸೋಲಿಸಲು ಸಾಧ್ಯ ಎಂದೂ ತಿರುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next