Advertisement

ಪೊಲೀಸರಿಗೆ ಕೆಲಸ ಕೊಡುವ ರೀತಿ ಮಾಡಬೇಡಿ : ಗೃಹ ಸಚಿವರ ಎಚ್ಚರಿಕೆ

02:56 PM Dec 31, 2021 | Team Udayavani |

ಬೆಂಗಳೂರು : ಇವತ್ತು ಬೆಂಗಳೂರು ನಗರದಲ್ಲಿ 6 ಗಂಟೆಯಿಂದಲೇ ನಿರ್ಭಂದ ಇದೆ, ಹೆಚ್ಚು ಜನ ಸೇರಬಾರದು 10 ಗಂಟೆಯಿಂದ ನೈಟ್ ಕರ್ಫ್ಯೂ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಎಂಟು ರಾಜ್ಯಗಳಲ್ಲಿ ಕೊರೊನಾ ಸ್ಪೋಟವಾಗಿದೆ. ನಮ್ಮ ರಾಜ್ಯದಲ್ಲೂ ಕೊರೊನಾ ಹರಡುತ್ತಿದೆ. ಹೀಗಾಗಿ ಸರ್ಕಾರ ಕೆಲ ನಿರ್ಭಂದಗಳನ್ನ ಹಾಕಿದೆ. ನಿರ್ಬಂಧಗಳನ್ನ ಹಾಕಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಜನರು ಇದಕ್ಕೆ ಸಹಕರಿಸಬೇಕು. ಅವರವರ ಮನೆಯಲ್ಲೇ ಸೆಲೆಬ್ರೇಶನ್ ಮಾಡಬೇಕು. ಗುಂಪುಗೂಡಿ ಸೆಲೆಬ್ರೇಶನ್ ಮಾಡಬಾರದು. ಪೊಲೀಸರಿಗೆ ಕೆಲಸ ಕೊಡುವ ರೀತಿ ಮಾಡಬೇಡಿ. ದಯವಿಟ್ಟು ಸಾರ್ವಜನಿಕರು ಸಹಕರಿಸಿ ಎಂದರು.

ಹೋಟೆಲ್, ಪಬ್, ರೆಸ್ಟೋರೆಂಟ್ ಮಾಲೀಕರಿಗೆ ಆರ್ಥಿಕ ನಷ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ನಿರ್ಬಂಧಗಳನ್ನ ಹಾಕಲು ನಮಗೆ ಸಂತೋಷವಿಲ್ಲ ನಮಗೆ ನೋವಿದೆ. ಹೋಟೆಲ್ ಪಬ್ ಅವರವರ ವ್ಯಾಪರ ಮಾಡುತ್ತಿದ್ದಾರೆ. ಆದರೆ ಸದ್ಯ ಬದುಕು ಮುಖ್ಯ. ನಾವೂ ಈಗಾಗಲೇ ಸ್ಮಶಾನದಲ್ಲಿ ಆ್ಯಂಬುಲೆನ್ಸ್ ಗಳು ಕ್ಯೂ ನಿಲ್ಲುತ್ತಿದ್ದುದನ್ನ ನೋಡಿದ್ದೇವೆ. ಮಾಧ್ಯಮಗಳಲ್ಲಿ ಅದನ್ನ ನೋಡುವಾಗ ತುಂಬಾ ನೋವಾಗಿದೆ. ಅದು ಆಗಬಾರದು ಅಂತಾ  ಈ ರೀತಿ ನಿರ್ಬಂಧ ಮಾಡುತ್ತಿದ್ದೇವೆ.  ರಾಜ್ಯದ ಎಲ್ಕಾ ಕಡೆ ಇದೆ ಅನ್ವಯಯಾಗಲಿದೆ. ಕರಾವಳಿ ಭಾಗದಲ್ಲೂ ಇದು ಅನ್ವಯವಾಗಲಿದೆ ಎಂದರು.

ಕಾಂಗ್ರೆಸ್ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪಾದಯಾತ್ರೆಯಿಂದ ಏನೂ‌ ಆಗುವುದಿಲ್ಲ. ಆರೂವರೆ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು ಆಗ ಅವರು ಏನೂ ಮಾಡಲಿಲ್ಲ. ಪಾದಯಾತ್ರೆಯ ಸ್ಟಂಟ್ ನಿಂದ ಚುನಾವಣೆ ಗೆಲ್ಲಲಾಗುವುದಿಲ್ಲ. ಪಾದಯಾತ್ರೆಯಿಂದ ಚುನಾವಣೆ ಗೆಲ್ಲುತ್ತೇವೆ ಅನ್ನುವುದು ಅವರ ಭ್ರಮೆ. ಪಾದಯಾತ್ರೆಗೆ ಅನುಮತಿ‌ ಕೊಡುವ ಬಗ್ಗೆ ನಿರ್ಧಾರ ತಗೆದುಕೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next