ಬೆಳ್ತಂಗಡಿ: ಮಂಗಳವಾರ ರಾತ್ರಿ ದಿಢೀರ್ ಪಸರಿಸಿದ ಗಾಳಿಸುದ್ದಿಯಿಂದ ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಮಹಿಳೆಯರು ಮಾಂಗಲ್ಯದಲ್ಲಿರುವ ಹವಳವನ್ನು ಜಜ್ಜಿದ ವರದಿ ಓದಿ ಆಘಾತವಾಯಿತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Advertisement
ಹವಳ ಧರಿಸುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಸಂಗ್ರಹವಾಗುತ್ತದೆ ಹಾಗೂ ದೃಷ್ಟಿದೋಷ ದೂರವಾಗುತ್ತದೆ ಇತ್ಯಾದಿ ಕೆಲವು ಶುಭ ನಂಬಿಕೆಗಳಿವೆ. ಆದರೆ ಇದಕ್ಕೆ ತೀರಾ ವಿರುದ್ಧವಾಗಿ ಅಶುಭ ವಾರ್ತೆಯಿಂದ ಮಹಿಳೆಯರು ಭಯ ಭೀತರಾಗಬಾರದು. ಈ ರೀತಿ ಸೃಷ್ಟಿಯಾಗುವ ದಿಢೀರ್ ಸುದ್ದಿ ಮತ್ತು ಅನಧಿಕೃತ ಪ್ರಚಾರಗಳಿಂದ ಮಹಿಳೆಯರು ವಿಚಲಿತರಾಗಬಾರದು ಎಂದು ಹೆಗ್ಗಡೆಯವರು ಸಲಹೆ ನೀಡಿದ್ದಾರೆ.