Advertisement
– ರಾತ್ರಿ ತಡವಾಗಿ ಮಲಗುವ ಅಭ್ಯಾಸವಿದ್ದವರಿಗೆ ಬೆಳಗ್ಗೆ ಬೇಗ ಎಚ್ಚರವಾಗುವುದಿಲ್ಲ. ಹಾಗಾಗಿ, ಬೇಗ ಮಲಗುವುದನ್ನು ರೂಢಿಸಿಕೊಳ್ಳಿ.– ಸಂಜೆ ವೇಳೆ ವ್ಯಾಯಾಮ ಅಥವಾ ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಹತ್ತು ನಿಮಿಷ ವಾಕಿಂಗ್ ಮಾಡಿದರೂ ಆದೀತು.
-ಆಹಾರ ಸೇವಿಸಿದ ತಕ್ಷಣ ಮಲಗುವುದು ಸರಿಯಲ್ಲ. ಇದು ಅಜೀರ್ಣ ಸಮಸ್ಯೆಯನ್ನುಂಟು ಮಾಡುವುದಲ್ಲದೆ, ನಿದ್ರಾಹೀನತೆಗೂ ಕಾರಣವಾಗುತ್ತದೆ. ಮಲಗುವ ಕನಿಷ್ಠ 3 ಗಂಟೆ ಮುಂಚೆ ಊಟ ಮಾಡಬೇಕು. ಮಾಂಸಾಹಾರವಾದರೆ 4-5 ಗಂಟೆಗಳ ಮುಂಚೆ ಸೇವಿಸಬೇಕು.
– ಮಗುವಿನಂತೆ ಮಲಗುವುದು ಅಂತಾರೆ. ಅಂದರೆ, ಮಕ್ಕಳಿಗೆ ಯಾವ ಚಿಂತೆಯೂ ಇರುವುದಿಲ್ಲ. ಈ ಕಾರಣದಿಂದಲೇ ಮಕ್ಕಳು ಹಾಸಿಗೆಗೆ ಜಾರಿದೊಡನೆ ನಿದ್ದೆ ಹೋಗುತ್ತಾರೆ. ಹಾಗೆಯೇ, ಮಲಗುವಾಗ ಎಲ್ಲ ಚಿಂತೆಗಳನ್ನು ದೂರ ಮಾಡಿದರೆ ಬೇಗ ನಿದ್ದೆ ಬರುತ್ತದೆ.
-ಮಲಗುವ ಮುನ್ನ ಹತ್ತು ನಿಮಿಷ ಕಣ್ಣು ಮುಚ್ಚಿ ಕುಳಿತು, ನಾಳೆ ಮಾಡಬೇಕಾದ ಕೆಲಸಗಳ ಕುರಿತು ಮನದಲ್ಲಿಯೇ ಲೆಕ್ಕಾಚಾರ ಹಾಕಿ. ನಂತರ ಐದು ನಿಮಿಷ ದೀರ್ಘವಾಗಿ ಉಸಿರಾಡಿ, ಎಲ್ಲ ವಿಚಾರಗಳನ್ನೂ ಮರೆತು ದಿಂಬಿಗೆ ತಲೆ ಕೊಡಿ.
– ಮಲಗುವ ಒಂದು ಗಂಟೆಗೂ ಮುನ್ನ ಟಿ.ವಿ. ಆಫ್ ಮಾಡಿ, ಮೊಬೈಲ್ ತೆಗೆದು ಪಕ್ಕಕ್ಕೆ ಇಡಿ.