ಮುಂಬಯಿ: ಚುನಾವಣೆಯ ಮೊದಲ ಪ್ರಚಾರದ ವೇಳೆ ಕಲಮನೂರಿ ಕ್ಷೇತ್ರದ ಶಿವಸೇನೆ ಏಕನಾಥ್ ಶಿಂಧೆ ಬಣದ ಶಾಸಕ ಸಂತೋಷ್ ಬಂಗಾರ್ ಮತ್ತೊಮ್ಮೆ ಆಡಳಿತಾರೂಢ ಮಹಾಯುತಿ ಸರ್ಕಾರಕ್ಕೆ ಮುಜುಗರ ತಂದಿದ್ದಾರೆ.
ಅವರು ತಮ್ಮ ಕ್ಷೇತ್ರದ ಲಕ್ಷ ಗ್ರಾಮದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡಿದ ವಿಚಿತ್ರ ಸಲಹೆಗಾಗಿ ವಿಪಕ್ಷಗಳಿಂದ ಟೀಕೆಗೆ ಗುರಿಯಾಗಿದ್ದಾರೆ.
ಸಂತೋಷ್ ಬಂಗಾರ್ ಶಾಲಾ ಮಕ್ಕಳ ಮುಂದೆ ವಿಚಿತ್ರ ಭಾಷಣ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಂದಿನ ಚುನಾವಣೆಯಲ್ಲಿ ತಂದೆ-ತಾಯಿ ತನಗೆ (ಬಂಗಾರ್) ಮತ ಹಾಕದಿದ್ದರೆ ಎರಡು ದಿನ ಊಟ ಮಾಡಬಾರದು ಎಂದು ಮಕ್ಕಳಿಗೆ ಹೇಳಿದರು. ‘ಏಕೆ ಊಟ ಮಾಡುತ್ತಿಲ್ಲ’ ಎಂದು ಹೆತ್ತವರು ಕೇಳಿದರೆ ನಾವು ಊಟ ಮಾಡಬೇಕಾದರೆ ‘ಸಂತೋಷ್ ಬಂಗಾರ್’ಗೆ ಮತ ಹಾಕಬೇಕು ಎಂದು ಹೇಳಿ’ ಎಂದು ಬಂಗಾರ್ ಅವರು ಹೇಳಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಜೊತೆಗೆ ಮುಜುಗರ ತರುವಂತಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಿಂದ ಬಂದಿರುವ ಶಾಸಕ ಸಂತೋಷ್ ಬಂಗಾರ್, ಚುನಾವಣಾ ಆಯೋಗವು ಚುನಾವಣಾ ಸಂಬಂಧಿತ ಚಟುವಟಿಕೆಗಳಲ್ಲಿ ಮಕ್ಕಳನ್ನು ಬಳಸದಂತೆ ನಿರ್ದೇಶನಗಳನ್ನು ನೀಡಿದ ಒಂದು ವಾರದಲ್ಲೇ ಬಂಗಾರ್ ಹೊಸ ವಿವಾದಕ್ಕೆ ಸಿಲುಕಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಮತಗಳನ್ನು ಗಳಿಸಲು ರಾಜಕೀಯ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಮತ್ತು ಬಾಲಕಾರ್ಮಿಕ ಕಾಯಿದೆ, 1986 ರ ಉಲ್ಲಂಘನೆಯೂ ಆಗಿದೆ ಎಂದು ಹೇಳಲಾಗಿದೆ.
ಚಿಕ್ಕ ಮಕ್ಕಳನ್ನು ಮತ ಪಡೆಯಲು ಶೋಷಣೆ ಮಾಡುತ್ತಿರುವ ಬಂಗಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ವಿಪಕ್ಷಗಳು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Ayodhya: ನಾಳೆ ಅಯೋಧ್ಯೆ ಬಾಲರಾಮನ ದರ್ಶನ ಪಡೆಯಲಿದ್ದಾರಂತೆ ಕೇಜ್ರಿವಾಲ್ ಕುಟುಂಬ