Advertisement

ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಬೇಡಿ: ಗೋಣಿ

11:52 AM Jan 02, 2020 | Team Udayavani |

ಬನಹಟ್ಟಿ: ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕಿನ ಸ್ವಾತಂತ್ರ್ಯವಿದೆ. ನಮ್ಮ ಕಾನೂನಿನ ಹಕ್ಕು ಹಾಗೂ ಕರ್ತವ್ಯ ಸದುಪಯೋಗಪಡಿಸಿಕೊಂಡು ಉತ್ತಮ ಜೀವನ ನಡೆಸುವ ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯದ್ದಾಗಬೇಕು. ಹಕ್ಕು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖವೆಂದು ಹಿರಿಯ ಶ್ರೇಣಿ ನ್ಯಾಯಾಲಯ ನ್ಯಾಯಾಧೀಶರಾದ ರೇಷ್ಮಾ ಗೋಣಿ ಹೇಳಿದರು.

Advertisement

ಜಗದಾಳ ಸರ್ಕಾರಿ ಬಾಲಕರ ವಸತಿ ನಿಲಯ ಹಾಗೂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹದಿನಾಲ್ಕು ವರ್ಷದೊಳಗಿನ ಮಕ್ಕಳನ್ನು ಬಾಲಕಾರ್ಮಿಕರೆಂದು ಪರಿಗಣಿಸಲಾಗುತ್ತದೆ. ಅಂತಹ ಮಕ್ಕಳು ಶಿಕ್ಷಣ ಕಡ್ಡಾಯವಾಗಿ ಕಲಿಯುವ ಮೂಲಕ ಅನಕ್ಷರತೆಯಿಂದ ದೂರ ಉಳಿಯಬೇಕು ಎಂದರು.  ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಸಂಸ್ಕಾರದೊಂದಿಗೆ ಉನ್ನತ ಶಿಕ್ಷಣ ದೊರೆಯುವುದು ಸಾಧ್ಯವಾಗುತ್ತಿರುವುದು ಶಿಕ್ಷಣದ ಪ್ರಗತಿಯನ್ನು ತೋರಿಸುತ್ತಿದೆ ಎಂದರು.

ಅಶೋಕ ಬಂಗಿ ಅಧ್ಯಕ್ಷತೆ ವಹಿಸಿದ್ದರು. ಭರತ ಶಿರಹಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪುಟಾಣಿ, ಬಿ.ಆರ್‌. ಯಲ್ಲಟ್ಟಿ, ಎಸ್‌.ಜಿ. ಉಳ್ಳಾಗಡ್ಡಿ, ಉಪತಹಶೀಲ್ದಾರ್‌ ಬಸವರಾಜ ಬಿಜ್ಜರಗಿ, ರವಿ ಸಂಪಗಾಂವಿ, ಮಹಾಂತೇಶ ಪದಮಗೊಂಡ, ಪ್ರಸನ್ನ ಬಾಣಕಾರ, ಎ.ಎಸ್‌. ತಳವಾರ ಇದ್ದರು. ಮಾನವ ಹಕ್ಕುಗಳ ಕುರಿತು ನ್ಯಾಯವಾದಿ ಎಸ್‌.ಎ. ಪಾಟೀಲ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು ನೋಟರಿ ಕೆ.ಎಸ್‌. ಅಕ್ಕೆನ್ನವರ ಉಪನ್ಯಾಸ ನೀಡಿದರು. ಎಂ.ಎ. ಮಾಳೇದ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next