Advertisement

ತಪ್ಪುಗಾರನನ್ನು ರಕ್ಷಿಸಲು ಕಾನೂನು ಹಸ್ತಕ್ಷೇಪ ಮಾಡಬೇಡಿ: ರಾಹುಲ್‌

11:20 AM Aug 07, 2017 | udayavani editorial |

ಹೊಸದಿಲ್ಲಿ : “ಕಾನೂನು ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಬೇಡಿ; ತಪ್ಪುಗಾರನಿಗೆ ಸರಿಯಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಿ’ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಹರಿಯಾಣದ ಬಿಜೆಪಿ ಸರಕಾರಕ್ಕೆ ಬುದ್ದಿವಾದ ಹೇಳಿದ್ದಾರೆ. 

Advertisement

ಕಳೆದ ಆಗಸ್ಟ್‌ 4ರ ಶುಕ್ರವಾರ ರಾತ್ರಿ ಐಎಎಸ್‌ ಅಧಿಕಾರಿಯ ಮಗಳಿಗೆ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಆಕೆಯನ್ನು  ಕಾರಿನಲ್ಲಿ ಬೆನ್ನಟ್ಟಿ  ಪ್ರಾಣ ಭೀತಿ ಹುಟ್ಟಿಸಿ ಕಿರುಕುಳ ನೀಡಿದ ಹರಿಯಾಣ ಬಿಜೆಪಿ ಘಟದ ಮುಖ್ಯಸ್ಥನ 23ರ ಹರೆಯದ ಪುತ್ರ ವಿಕಾಸ್‌ ಬರಾಲಾ ಎಂಬಾತನ ವಿರುದ್ಧದ ಎಫ್ಐಆರ್‌ ಅನ್ನು ಪೊಲೀಸರು ರಾಜಕೀಯ ಒತ್ತಡದ ಪರಿಣಾಮವಾಗಿ ದುರ್ಬಲಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದಕ್ಕೆ ಪ್ರತಿಯಾಗಿ ರಾಹುಲ್‌, ಹರಿಯಾಣ ಸರಕಾರಕ್ಕೆ ಈ ಬುದ್ಧಿಮಾತನ್ನು ಹೇಳಿದ್ದಾರೆ. 

ಹರಿಯಾಣ ಬಿಜೆಪಿ ಮುಖ್ಯಸ್ಥನ ಮಗನಿಂದ ನಡೆದಿರುವ ಈ ಪ್ರಾಣ ಭೀತಿ ಕಿರುಕುಳದ ಕೃತ್ಯವನ್ನು ರಾಹುಲ್‌ ತಮ್ಮ ಟ್ವೀಟ್‌ನಲ್ಲಿ ಬಲವಾಗಿ ಖಂಡಿಸಿದ್ದಾರೆ. 

ಬರಾಲಾ ಅವರ ಪುತ್ರ ವಿಕಾಸ್‌ ಕಳೆದ ಶುಕ್ರವಾರ ರಾತ್ರಿ ಕಾರ್ಯಕ್ರಮ ಮುಗಿಸಿ ತನ್ನ ಮನೆಗೆ ಕಾರಿನಲ್ಲಿ ಮರಳುತ್ತಿದ್ದ ಐಎಎಸ್‌ ಅಧಿಕಾರಿಯೋರ್ವರ ಪುತ್ರಿಯನ್ನು ಕಾರಿನಲ್ಲಿ ಬೆನ್ನಟ್ಟಿ, ಕಾರನ್ನು ರಸ್ತೆಗೆ ಅಡ್ಡ ಇರಿಸಿ, ಆಕೆಗೆ ಪ್ರಾಣ ಭೀತಿ ಒಡ್ಡುವ ಕಿರುಕುಳ ನೀಡಿದ್ದ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದರು. ಈ ಕೃತ್ಯದಲ್ಲಿ ವಿಕಾಸ್‌ ಸ್ನೇಹಿತನೊಬ್ಬ ಶಾಮೀಲಾಗಿದ್ದ.

Advertisement

Udayavani is now on Telegram. Click here to join our channel and stay updated with the latest news.

Next