Advertisement
ಮಸೀದಿಗಳ ಮೂಲಕ ಜಾಗೃತಿಜನಸಂದಣಿಯ ಬಗ್ಗೆ ಯಾವುದೇ ದೂರುಗಳಿಲ್ಲ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಎರಡು ಗಂಟೆಗಳ ಸಮಯಾವಕಾಶ ನೀಡಲಾಗಿದೆ. ಇದನ್ನು ಕೊಂಧ್ವಾ ನಿವಾಸಿಗಳು ಚೆನ್ನಾಗಿ ಗಮನಿಸಿದ್ದಾರೆ. ನಾವು ಮೊಬೈಲ್ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳು ಮತ್ತು ಪ್ರದೇಶದ ಮಸೀದಿಗಳ ಮೂಲಕ ಜಾಗೃತಿ ಮೂಡಿಸಿದ್ದೇವೆ ಎಂದು ಪುಣೆ ಪೊಲೀಸರ ವಲಯ -5 ರ ಉಪ ಆಯುಕ್ತ ಸುಹಾಸ್ ಬಾವೆ ಹೇಳಿದರು. ನಗರದಲ್ಲಿ ಸಕಾರಾತ್ಮಕ ಪ್ರಕರಣಗಳ ಹೆಚ್ಚಳದ ನಡುವೆ ನಗರದ ನಾಲ್ಕು ಭಾಗಗಳಲ್ಲಿ ಕರ್ಫ್ಯೂ ಘೋಷಿಸಿದ ಎರಡನೇ ದಿನದಂದು ಆಯುಕ್ತ ವೆಂಕಟೇಶಮ್ ಮಾತನಾಡುತ್ತಿದ್ದರು. ನಗರದ ಉಳಿದ ಭಾಗಗಳು ಇಡೀ ದೇಶದೊಂದಿಗೆ ಎಪ್ರಿಲ್ 14 ರವರೆಗೆ ಲಾಕ್‌ಡೌನ್‌ನಲ್ಲಿವೆ. ಆದಾಗ್ಯೂ, ಕರ್ಫ್ಯೂ ಹಾಕಿದ ಪ್ರದೇಶಗಳಲ್ಲಿ, ಔಷಧಾಲಯಗಳನ್ನು ಹೊರತುಪಡಿಸಿ ಅಗತ್ಯ ವಸ್ತುಗಳನ್ನು ಒದಗಿಸುವ ಅಂಗಡಿಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ತೆರೆದಿಡಲು ಅವಕಾಶ ನೀಡಲಾಗಿದೆ.
Related Articles
Advertisement
ಲಾಕ್‌ಡೌನ್ ಉಲ್ಲಂಘನೆ: 34 ಸಾವಿರ ಕೇಸುನಾಗಪುರ: ಕೊರೊನಾ ವೈರಸ್ ಲಾಕ್‌ಡೌನ್ ಉಲ್ಲಂಘನೆಗಾಗಿ ಮಹಾರಾಷ್ಟ್ರ ಪೊಲೀಸರು ಈವರೆಗೆ ರಾಜ್ಯಾದ್ಯಂತ 34,010 ಪ್ರಥಮ ಮಾಹಿತಿ ವರದಿಗಳನ್ನು (ಎಫ್ಐಆರ್) ದಾಖಲಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ರಾಜ್ಯ ಪೊಲೀಸರ ಕಾನೂನು ಮತ್ತು ಸುವ್ಯವಸ್ಥೆ ಇಲಾಖೆಯ ಹೇಳಿಕೆಯ ಪ್ರಕಾರ, ಪುಣೆಯಲ್ಲಿ (4,317) ಅತಿ ಹೆಚ್ಚು ಎಫ್ಐಆರ್ ದಾಖಲಾಗಿದೆ. ಮುಂಬಯಿಯಲ್ಲಿ 1,930 ಅಪರಾಧಗಳು ದಾಖಲಾಗಿದ್ದರೆ, ನಾಗ್ಪುರದಲ್ಲಿ 2,299, ನಾಸಿಕ್ ನಗರದಲ್ಲಿ 2,227, ಸೊಲ್ಲಾಪುರ ನಗರದಲ್ಲಿ 2,994, ಪಿಂಪ್ರಿ ಚಿಂಚಾಡ್ನಲ್ಲಿ 2,690, ಅಹ್ಮದ್ನಗರದಲ್ಲಿ 3,215 ಪ್ರಕರಣಗಳು ದಾಖಲಾಗಿವೆ. ಕ್ವಾರೆಂಟೈನ್ ನಿಯಮಗಳನ್ನು ಉಲ್ಲಂ ಸಿದ್ದಕ್ಕಾಗಿ 468 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸುವಾಗ 69 ಮಂದಿ ಪೊಲೀಸ್ ಸಿಬಂದಿ ದಾಳಿ ಎದುರಿಸಿದ್ದು, ಈ ಸಂಬಂಧ 161 ಜನರನ್ನು ಬಂಧಿಸಲಾಗಿದೆ. ಕನಿಷ್ಠ ಇಬ್ಬರು ಪೊಲೀಸರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದು, ಇಬ್ಬರನ್ನೂ ದಿಗ್ಬಂಧನದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಮದ್ಯ ಸೇರಿದಂತೆ ವಿವಿಧ ಸರಕುಗಳನ್ನು ಅಕ್ರಮವಾಗಿ ಸಾಗಿಸಿದ್ದಕ್ಕಾಗಿ ಪೊಲೀಸರು 777 ಪ್ರಕರಣಗಳನ್ನು ದಾಖಲಿಸಿ¨ªಾರೆ. ಈ ಪ್ರಕರಣಗಳಲ್ಲಿ ಒಟ್ಟು 2,510 ಜನರನ್ನು ಬಂಧಿಸಲಾಗಿದ್ದು, 18,995 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧಿಗಳಿಂದ ಲಾಕ್ ಡೌನ್ ಉಲ್ಲಂ ಸಿದ್ದಕ್ಕಾಗಿ 1.22 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಅದೇ, ವೀಸಾ ಷರತ್ತುಗಳ ಉಲ್ಲಂಘನೆಗಾಗಿ ವಿದೇಶಿಯರ ಕಾಯ್ದೆಯಡಿ ಹದಿನೈದು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮುಂಬಯಿ ಮತ್ತು ಅಹ್ಮದ್‌ನಗರದಲ್ಲಿ ತಲಾ ಮೂರು, ಅಮರಾವತಿ ನಗರದಲ್ಲಿ ಎರಡು, ಪುಣೆ, ನಾಗ್ಪುರ, ಥಾಣೆ, ಚಂದ್ರಪುರ, ಗಡಿcರೋಲಿ, ನವಿಮುಂಬಯಿ ಮತ್ತು ನಾಂದೇಡ್ನಲ್ಲಿ ಕ್ರಮವಾಗಿ ಒಂದೊಂದು ಪ್ರಕರಣ ದಾಖಲಾಗಿದೆ. ಜನರು ಲಾಕ್‌ಡೌನ್ ಅನುಸರಿಸಬೇಕು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ಇನ್ಸ್‌ಪೆಕ್ಟರ್ ಜನರಲ್ ಮಿಲಿಂದ್ ಭಾರಂಬೆ ಅವರು ಅಧಿಕೃತ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.