Advertisement

BJP ಸೋಲಿಸಿದವರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ: ಬಾಲಚಂದ್ರ

09:35 PM Jun 25, 2023 | Team Udayavani |

ಬೆಳಗಾವಿ: ಬಿಜೆಪಿಯಲ್ಲಿದ್ದು ಬಲಿಷ್ಠರಾಗಿ ನಂತರ ಬಿಜೆಪಿ ಸೋಲಿಸಿದವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳಬಾರದು ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ ಮಾಡಿದರು.

Advertisement

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೈಲಹೊಂಗಲ, ರಾಮದುರ್ಗ, ಕಿತ್ತೂರು ಕ್ಷೇತ್ರದಲ್ಲಿ ವಿರೋಧಿ ಸಿ ಬಿಜೆಪಿ ಸೋಲಿಸಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿದವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಅಧಿಕಾರ ಇದ್ದಾಗ ಎಂಜಾಯ್‌ ಮಾಡಿ ನಂತರ ಕೊನೆಗೆ ಬಿಜೆಪಿಗೆ ಮೋಸ ಮಾಡಿದ್ದಾರೆ. ಅವರನ್ನು ಬಿಟ್ಟು ನಮ್ಮ ಸಶಕ್ತ ಕಾರ್ಯಕರ್ತರೊಂದಿಗೆ ಚುನಾವಣೆ ಮಾಡೋಣ ಎಂದು ಬಸವರಾಜ ಬೊಮ್ಮಾಯಿ ಹಾಗೂ ಇತರೆ ಮುಖಂಡರಲ್ಲಿ ಮನವಿ ಮಾಡಿದರು.

ಚುನಾವಣೆಯಲ್ಲಿ ಸೋತಿದ್ದಕ್ಕೆ ಶಾಸಕರು ಸೇರಿ ಎಲ್ಲರೂ ಅಧೈರ್ಯ ಆಗಿದ್ದಾರೆ. ಕಾರ್ಯಕರ್ತರಿಗೆ ಈ ವಿಚಾರದಲ್ಲಿ ಬಹಳ ನೋವಾಗಿದೆ. ನಮ್ಮೊಂದಿಗೆ ಪ್ರಧಾನಿ ಮೋದಿ ಅವರಂಥ ನಾಯಕರಿದ್ದಾರೆ. ಇನ್ನು ಮುಂದೆ ಪಕ್ಷವನ್ನು ಸಂಘಟನೆ ಮಾಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸೋಣ ಎಂದರು.

ಕೋರ್‌ ಕಮಿಟಿಯಲ್ಲಿ ಬಲಿಷ್ಠರನ್ನು ಸೇರಿಸಿ: ರಾಜ್ಯ ಕೋರ್‌ ಕಮಿಟಿ ಎಂದರೆ ಉನ್ನತವಾದ ಕಮಿಟಿ. ಕ್ಯಾಬಿನೆಟ್‌ ಸಚಿವರೇ ಕೋರ್‌ ಕಮಿಟಿಯಲ್ಲಿಯೂ ಇರುತ್ತಿದ್ದರು. ಕೋರ್‌ ಕಮಿಟಿಯಲ್ಲಿ ಇದ್ದ ಸಚಿವರು ತಾವೂ ಗೆಲ್ಲದೇ ಒಂದೂ ಸೀಟ್‌ನ್ನು ಗೆಲ್ಲಿಸಲು ಆಗಿಲ್ಲ. ಅಂಥವರನ್ನು ಯಾವುದೇ ಕಾರಣಕ್ಕೂ ಕೋರ್‌ ಕಮಿಟಿಯಲ್ಲಿ ಇಟ್ಟುಕೊಳ್ಳಬಾರದು. ಶಕ್ತಿಶಾಲಿ ಹಾಗೂ ಬಲಿಷ್ಠರಾದವರನ್ನು ಇಟ್ಟುಕೊಂಡು ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕಿದೆ. ಈ ಬಗ್ಗೆ ಹೈಕಮಾಂಡ್‌ಗೆ ಸಂದೇಶ ಕಳುಹಿಸಬೇಕು. ಮುಂದಿನ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಎರಡೂ ಸ್ಥಾನ ಬಿಜೆಪಿ ಪಾಲಾಗಲಿವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next