Advertisement

ತಮಿಳುನಾಡು ಲಾರಿ ಚಾಲಕರು ಕಂಡು ಬಂದರೆ ಭಯ ಪಡದಿರಿ: ಕವಿತಾ

05:46 PM Apr 25, 2020 | Suhan S |

ಕಾರಟಗಿ: ತಮಿಳುನಾಡಿನ ಲಾರಿಗಳು ಕಾರಟಗಿ ಪಟ್ಟಣಕ್ಕೆ ಬಂದರೆ ಯಾರೂ ಭಯ ಪಡಬಾರದು ಎಂದು ತಹಶೀಲ್ದಾರ್‌ ಕವಿತಾ ಆರ್‌. ಹೇಳಿದರು.

Advertisement

ಮಂಗಳವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಹೊರ ರಾಜ್ಯಗಳಿಗೆ ಭತ್ತ ಸಾಗಾಟಕ್ಕೆ ಪರವಾನಗಿ ನೀಡಿದ ಹಿನ್ನೆಲೆಯಲ್ಲಿ ತಾಲೂಕಿನಿಂದ ಭತ್ತ ಸಾಗಾಟ ನಡೆದಿತ್ತು. ಆದರೆ ಇತ್ತೀಚೆಗೆ ಕೆಲ ದಿನಗಳ ಹಿಂದೆ ದಲಾಲಿ ವರ್ತಕರು ತಮಿಳುನಾಡಿನಿಂದ ಬರುವ ಲಾರಿ ಚಾಲಕರಿಂದ ಕೋವಿಡ್ 19 ಸೋಂಕು ಹರಡಬಹುದೆಂಬ ಆತಂಕದಿಂದ ಎಲ್ಲ ವರ್ತಕರು ತಮಿಳುನಾಡಿಗೆ ಭತ್ತ ಸಾಗಾಟ ಸ್ಥಗಿತಗೊಳಿಸಿದ್ದರು. ಆದರೆ ಇದರಿಂದಾಗಿ ಭತ್ತ ಖರೀದಿ ಗೆ ಹಿನ್ನಡೆಯಾಗಬಹುದು. ಆ ನಿಟ್ಟಿನಲ್ಲಿ ತಾಲೂಕಾಡಳಿತ ತಮಿಳುನಾಡಿಗೆ ಭತ್ತ ಸಾಗಾಟ ಮುಂದುವರಿಸಲು ಆದೇಶಿಸಿದೆ. ಚೆಕ್‌ಪೋಸ್ಟ್‌ನಲ್ಲಿ ತಮಿಳುನಾಡಿನಿಂದ ಬರುವ, ಹೋಗುವ ಲಾರಿ ಚಾಲಕರ ತಪಾಸಣೆ ನಡೆಸಿ ಮುಂದೆ ತಲುಪುವ ನಗರಕ್ಕೆ ತೆರಳಲು ಪರವಾನಗಿ ನೀಡಲಾಗುತ್ತದೆ. ಆದ್ದರಿಂದ ಕಾರಟಗಿ ಪಟ್ಟಣಕ್ಕೆ ಬರುವ ಲಾರಿಗಳ ಚಾಲಕರನ್ನು ಕಂಡು ಭಯಪಡಬೇಡಿ. ವರ್ತಕರು, ಸಾರ್ವಜನಿಕರು ಕೂಡ ಕೋವಿಡ್ 19 ವೈರಸ್‌ ನಿಯಂತ್ರಣಕ್ಕೆ ಕೈ ಜೋಡಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next