Advertisement
ಸಿಂಧನೂರು ಕ್ಷೇತ್ರದ ಟಿಕೆಟ್ ವಂಚಿತ ಬಸನಗೌಡ ಬಾದರ್ಲಿ ಅವರ ಮನವೊಲಿಕೆ ವೇಳೆ ಮಾತನಾಡಿದ ಅವರು, ಪಕ್ಷ ತಾಯಿ ಇದ್ದಂತೆ. ಒಮ್ಮೆ ವ್ಯತ್ಯಾಸ ಆಗಬಹುದು. ಆದರೆ ತಾಯಿ ವಿರುದ್ಧವೇ ಕೋಪ ಬರಬಹುದು. ಯಾವುದೇ ಕಾರಣಕ್ಕೂ ಮಾತೃ ಪಕ್ಷ ತೊರೆಯಬಾರದು. ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದಾಗ ನನಗೂ ಟಿಕೆಟ್ ತಪ್ಪಿತ್ತು. ಆಗ ನಿಮ್ಮ ಹಾಗೆ ನನ್ನ ಬೆಂಬಲಿಗರು ಕೋಪದಲ್ಲಿದ್ದರು. ಭವಿಷ್ಯದ ಬಗ್ಗೆ ಯೋಚನೆ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಇರಲಿಲ್ಲ ಎಂದರೆ ನಾನು ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಆಗುತ್ತಿರಲಿಲ್ಲ. ಹಾಗೆ ಬಸನಗೌಡ ಬಾದರ್ಲಿ ಕೂಡ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಆಗುತ್ತಿರಲಿಲ್ಲ. ನಮಗೆ ಪಕ್ಷ ಮುಖ್ಯ. ಈ ಹಿನ್ನೆಲೆಯಲ್ಲಿ ಅವರಿಗೆ ಭವಿಷ್ಯದಲ್ಲಿ ದೊಡ್ಡ ಜವಾಬ್ದಾರಿ ವಹಿಸಲಾಗುವುದು. ಅಲ್ಲಿಯ ತನಕ ಕಾಯಬೇಕು ಎಂದರು.
ಹೈಕಮಾಂಡ್ ಪರವಾಗಿ ಸುರ್ಜೆವಾಲಾ ಭಾಷಣ, ನಲಪಾಡ್ ಮಾತು ಕೇಳಿಸಿಕೊಳ್ಳದೆ ಕಾರ್ಯಕರ್ತರು ಕೂಗಾಟ, ತಳ್ಳಾಟ ನಡೆಸಿದರು. ನಿಯಂತ್ರಣಕ್ಕೆ ಬಾರದೇ ಇದ್ದಾಗ ಬಸನಗೌಡ ಬಾದರ್ಲಿ ಕಣ್ಣೀರಿಟ್ಟರು. ಕೊನೆಯಲ್ಲಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.