Advertisement

ಶೀಲ ಶಂಕಿಸಿ ಪತ್ನಿಯ ಗುಪ್ತಾಂಗವನ್ನೇ ಹೊಲಿದ ಪತಿ; ಪತಿಯನ್ನು ಬಂಧಿಸಬೇಡಿ ಎಂದ ಪತ್ನಿ

01:51 PM Aug 28, 2021 | Team Udayavani |

ಮಧ್ಯಪ್ರದೇಶ: ಪತ್ನಿ ತನಗೆ ಮೋಸ ಮಾಡುತ್ತಿದ್ದಾಳೆ ಎಂದು ಶಂಕಿಸಿದ ಪತಿ, ಪತ್ನಿಯ ಗುಪ್ತಾಂಗವನ್ನೇ ಹೊಲಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಮೈಸೂರು ಪ್ರಕರಣ: ಪಕ್ಕಾ ಪ್ಲ್ಯಾನ್ ಮಾಡಿ ಅತ್ಯಾಚಾರ ನಡೆಸಿದ್ದರು ಹೆದ್ದಾರಿ ದರೋಡೆಕೋರರು

ಈ ಘಟನೆ ಸಿಂಗ್ರೌಲಿಯ ರೈಲಾ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಬಗ್ಗೆ ಪತ್ನಿ ಆರೋಪಿ ಗಂಡನ ವಿರುದ್ಧ ದೂರು ದಾಖಲಿಸಿರುವುದಾಗಿ ಅಸಿಸ್ಟೆಂಟ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಸೋನ್ಕಾರ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಆರೋಪಿ ಪತಿ ತಲೆ ತಲೆಮರೆಯಿಸಿಕೊಂಡಿದ್ದು, ಏತನ್ಮಧ್ಯೆ ತನಗೆ ಪತಿ ಚಿತ್ರಹಿಂಸೆ ನೀಡಿದರೂ ಕೂಡಾ ಗಂಡನ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳಬಾರದು ಎಂದು ಮನವಿ ಮಾಡಿಕೊಂಡಿರುವುದಾಗಿ ಎಎಸ್ ಪಿ ಅನಿಲ್ ತಿಳಿಸಿದ್ದಾರೆ.

ಪತಿ ಇಂತಹ ಘೋರ ಕೃತ್ಯವನ್ನು ಪುನರಾವರ್ತಿಸದಂತೆ ಗದರಿಸುವಂತೆ ಪೊಲೀಸರ ಬಳಿ ಪತ್ನಿ ವಿನಂತಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದು, ಮಹಿಳೆ ಸಿಂಗ್ರೌಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಸ್ಥಿತಿ ಸ್ಥಿರವಾಗಿರುವುದಾಗಿ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next