ಬಜಗೋಳಿ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮತ್ತು ವಿದ್ಯಾಸಂಸ್ಥೆಗಳ ಬೇಡಿಕೆಗಳನ್ನು ಪೂರೈಸಲು ಸರಕಾರ ಕಾಲ ಕಾಲಕ್ಕೆ ವಿವಿಧ ರೀತಿಯ ಅನುದಾನಗಳನ್ನು ಬಿಡುಗಡೆ ಮಾಡುತ್ತಿದೆ. ಆದರೂ ಶಿಕ್ಷಣ ಸಂಸ್ಥೆಗಳ ಹಲವು ಬೇಡಿಕೆಗಳನ್ನು ಪೂರೈಸಲು ಸ್ಥಳೀಯ ದಾನಿಗಳು ಮುಂದಾಗಬೇಕು ಎಂದು ಕಾರ್ಕಳ ತಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಅವರು ಹೇಳಿದರು.
ಬಜಗೋಳಿ ಸರಕಾರಿ ಪ.ಪೂ. ಕಾಲೇಜಿನ ಬೆಳ್ಳಿ ಹಬ್ಬ ಆಚರಣೆ ಸಮಿತಿ ಸಭಾಂಗಣ ನಿರ್ಮಾಣ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಲಾನ್ಯಾಸ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮುಡಾರು ಗ್ರಾ.ಪಂ. ಅಧ್ಯಕ್ಷೆ ಗೀತಾ ಎಸ್. ಪಾಟ್ಕರ್, ಪ್ರಕಾಶ್ ಶೆಟ್ಟಿ, ಶೆಟ್ಟಿ ಕಾಂಪೌಂಡ್ ಉದ್ಯಮಿ ಪೂನಾ, ಉಮೇಶ್ ರಾವ್, ಚಿರಾಗ್ ಬಜಗೋಳಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಎಲ್. ಶೆಟ್ಟಿ, , ತಾ.ಪಂ. ಸದಸ್ಯ ಸುಧಾಕರ್ ಶೆಟ್ಟಿ ಮುಡಾರು, ಮುಡಾರು ಗ್ರಾ.ಪಂ. ಸದಸ್ಯ ಸುರೇಶ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಶಿಶುಪಾಲ ಜೈನ್ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಗಣೇಶ್ ಬರ್ಲಾಯ ಪ್ರಾಸ್ತಾವಿಸಿ, ಸ್ವಾಗತಿಸಿದರು. ಎಂ.ಜಿ. ಅಸದಿ ವಂದಿಸಿದರು. ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಕಾರ್ಯದರ್ಶಿ ಹಿತೇಶ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಶಿಲಾನ್ಯಾಸ
ಪೂರ್ವಾಹ್ನ ಕಾಲೇಜು ಮೈದಾನದಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಉದಯ ಕೋಟ್ಯಾನ್ ಅವರು ಸಭಾಂಗಣ ನಿರ್ಮಾಣಕ್ಕೆ ಶಂಕು ಸ್ಥಾಪನೆಗೈದರು. ಡಾ| ಎ.ಕೆ. ವೆಂಕಟಗಿರಿ ರಾವ್, ಕಾಲೇಜು ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಬೆಳ್ಳಿ ಹಬ್ಬ ಆಚರಣೆ ಸಮಿತಿಯ ಪದಾಧಿಕಾರಿಗಳು, ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.