Advertisement

IT: ಕೊಡುಗೈ ದಾನಿ ಶಿವ ನಾಡಾರ್‌ ದೇಶದಲ್ಲೇ ಅಗ್ರದಾನಿ

11:31 PM Nov 02, 2023 | Team Udayavani |

ಹೊಸದಿಲ್ಲಿ: ಎಚ್‌ಸಿಎಲ್‌ಟೆಕ್‌, ವಿಪ್ರೋ, ಇನ್ಫೋಸಿಸ್‌ ಸೇರಿದಂತೆ ದೇಶದ ಹಲವು ಐಟಿ ದಿಗ್ಗಜ ಸಂಸ್ಥೆಗಳ ಮುಖ್ಯಸ್ಥರು ಲೋಕೋಪಕಾರಿ ನೀತಿಗಳಲ್ಲೂ ಸೈ ಎನಿಸಿಕೊಂಡಿದ್ದು, ಹುರುನ್‌ ಇಂಡಿಯಾ 2023ರ ದಾನಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಈ ಪೈಕಿ ಎಚ್‌ಸಿ ಎಲ್‌ಟೆಕ್‌ ಮುಖ್ಯಸ್ಥ ಶಿವ ನಾಡಾರ್‌ ದೇಶದಲ್ಲೇ ಅಗ್ರದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಶಿವ ನಾಡಾರ್‌ 2,042 ಕೋಟಿ ರೂ.ಗಳನ್ನು ದಾನ ಮಾಡಿ ದ್ದಾರೆ. ಅಂದರೆ ಪ್ರಸಕ್ತ ವರ್ಷ ಪ್ರತೀ ದಿನ ಸರಾಸರಿ 5.6 ಕೋಟಿ ರೂ. ದಾನ ಮಾಡಿದಂತಾಗಿದೆ. ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ ಜಿ ಕುಟುಂಬ 1,774 ಕೋಟಿ ರೂ., ನಂದನ್‌ ನೀಲೇಕಣಿ 189 ಕೋಟಿ ರೂ.,ನಿಲೇಕಣಿ ಅವರ ಪತ್ನಿ ರೋಹಿಣಿ ನೀಲೇಕಣಿ 170 ಕೋಟಿ ರೂ., ಕ್ರಿಸ್‌ ಗೋಪಾಲಕೃಷ್ಣನ್‌ ಮತ್ತು ಕುಟುಂಬ 93 ಕೋಟಿ ರೂ. ಮಣಿಪಾಲ್‌ ಎಜುಕೇಶನ್‌ ಆ್ಯಂಡ್‌ ಹೆಲ್ತ್‌ನ ರಂಜನ್‌ ಪೈ ಮತ್ತು ಕುಟುಂಬ 92 ಕೋಟಿ ರೂ. ದೇಣಿಗೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next