ನವದೆಹಲಿ: ಕರ್ನಾಟಕದ ಬಳ್ಳಾರಿಯಲ್ಲಿರುವ ದೋಣಿಮಲೆ ಗಣಿಯಲ್ಲಿ ಎರಡು ವರ್ಷಗಳ ಬಳಿಕ ಕಬ್ಬಿಣದ ಗಣಿಗಾರಿಕೆ ಶೀಘ್ರವೇ ಶುರುವಾಗಲಿದೆ.
2018ರಲ್ಲಿ ರಾಜ್ಯ ಸರ್ಕಾರದ ಜತೆಗೆ ಉಂಟಾಗಿದ್ದ ಕಾನೂನು ಹೋರಾಟ ಶುರುವಾಗಿದ್ದರಿಂದ ಗಣಿಗಾರಿಕೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಎನ್‌ಡಿಎಂಸಿ ಮತ್ತು ಕರ್ನಾಟಕ ಸರ್ಕಾರದ ನಡುವೆ ಮಧ್ಯಂತರ ಒಪ್ಪಂದ ಏರ್ಪಟ್ಟಿದ್ದರೂ, ಗಣಿ ರಾಯಧನ ಹಂಚಿಕೆ ವಿಚಾರದಲ್ಲಿ ಒಮ್ಮತ ಉಂಟಾಗಿಲ್ಲವೆಂದು ಮೂಲಗಳನ್ನು ಉಲ್ಲೇಖೀಸಿ “ದ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಮಧ್ಯಂತರ ಒಪ್ಪಂದದ ಪ್ರಕಾರ ಎನ್‌ಡಿಎಂಸಿ ಅದಿರು ಮಾರಾಟವಾದ ಬಳಿಕ ಶೇ.37.5ರಷ್ಟು ಮೊತ್ತವನ್ನು ರಾಯಧನವಾಗಿ ನೀಡಬೇಕು. ಅದರಲ್ಲಿ ಹೆಚ್ಚುವರಿಯಾಗಿ ರಾಜ್ಯ ಸರ್ಕಾರಕ್ಕೆ ನೀಡುವ ಶೇ.15ರಷ್ಟು ಮೊತ್ತವೂ ಸೇರಿಕೊಂಡಿದೆ. 2022ರ ನವೆಂಬರ್‌ನಲ್ಲಿ ರಾಯಧನ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ವರದಿ ನೀಡುವ ವರೆಗೆ ಮಧ್ಯಂತರ ಒಪ್ಪಂದ ಅನುಷ್ಠಾನದಲ್ಲಿರುತ್ತದೆ.
ಇದನ್ನೂ ಓದಿ:ಶ್ರೀನಗರ: ಪೂಂಛ್ ನಲ್ಲಿ ದೇಗುಲ ಸ್ಫೋಟ ಸಂಚು ಬಯಲು; ಮೂವರ ಬಂಧನ
ಮೂಲಗಳ ಪ್ರಕಾರ ಎನ್‌ಡಿಎಂಸಿ ರಾಯಧನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಮಾತುಕತೆಯಲ್ಲಿ ತೊಡಗಿದೆ. 2018ರಲ್ಲಿ ರಾಜ್ಯ ಸರ್ಕಾರ ಗಣಿ ಲೀಸ್ ಅನ್ನು 20 ವರ್ಷಗಳಿಗೆ ವಿಸ್ತರಣೆ ಮಾಡಿದ್ದರೂ, ಸರಾಸರಿ ಮಾರಾಟವಾಗುವ ಅದರಿನ ಲಾಭದ ಶೇ.80ರಷ್ಟು ಮೊತ್ತವನ್ನು ನೀಡಬೇಕೆಂದು ಕೇಳಿತ್ತು. ಹೀಗಾಗಿ, ಎನ್‌ಡಿಎಂಸಿ ಗಣಿಗಾರಿಕೆ ಸ್ಥಗಿತಗೊಳಿಸಿತ್ತು. ಇದೇ ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದಾಗ ಸರ್ಕಾರದ ವಾದ ತಿರಸ್ಕೃತಗೊಂಡಿತ್ತು ಮತ್ತು ಲೀಸ್ ವಿಸ್ತರಣೆ ರದ್ದು ಮಾಡಿತ್ತು ರಾಜ್ಯ ಸರ್ಕಾರ.