Advertisement

ವಿವಿಧ ಸಂಘಟನೆಯಿಂದ ಸಿಎಂ ಪರಿಹಾರ ನಿಧಿಗೆ ದೇಣಿಗೆ

12:27 PM Apr 13, 2020 | mahesh |

ಮುಂಬಯಿ: ಕೋವಿಡ್‌ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಮಹಾರಾಷ್ಟ್ರ ಐಎಎಸ್‌ ಅಧಿಕಾರಿಗಳ ಪತ್ನಿಯರ ಸಂಘವು ಮುಖ್ಯಮಂತ್ರಿ ಪರಿಹಾರ ನಿಧಿಗೆ 1.75 ಲಕ್ಷ ರೂ.ಗಳ ದೇಣಿಗೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸಂಜಯ್‌ ಕುಮಾರ್‌ ಅವರು ಶನಿವಾರ ಸಂಜೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಚೆಕ್‌ ಹಸ್ತಾಂತರಿಸಿದ್ದು, ಇದನ್ನು ರಾಜ್ಯದಲ್ಲಿ ಸಾಂಕ್ರಾಮಿಕ ರೋಗವನ್ನು ಎದುರಿಸಲು ವಿವಿಧ ಉಪಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ.

Advertisement

ದೊಡ್ಡ ಕಾರ್ಪೋರೇಟ್‌ಗಳು ತಮ್ಮ ಸಂಪತ್ತನ್ನು ಸರಕಾರಿ ಯೋಜನೆಗಳಿಗೆ ಉಪಲಬ್ಧಗೊಳಿಸಿದ ಅನಂತರ ಮುಂಬಯಿ ಮತ್ತು ಮಹಾರಾಷ್ಟ್ರದ ಇತರೆಡೆಯ ಸಾಮಾನ್ಯ ವ್ಯಕ್ತಿಗಳು ಮತ್ತು ಸ್ಥಳೀಯ ಸ್ವಯಂಸೇವಕ ಸಂಘಗಳು ಕೂಡ ಲಾಕ್‌ಡೌನ್ನಿಂದಾಗಿ ಸಿಕ್ಕಿಕೊಂಡಿರುವ ವಲಸಿಗರು, ಸಾಮಾನ್ಯ ಕಾರ್ಮಿಕರು ಮತ್ತು ಇತರರಿಗೆ ಸಹಾಯ ಮಾಡಲು ಇದೇ ರೀತಿಯ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಒಂದು ವಿಶಿಷ್ಟ ಉಪಕ್ರಮದಲ್ಲಿ ಚಾಂದಿವಲಿಯ ವುಡ್‌ಲ್ಯಾಂಡ್‌ ಹೈಟ್ಸ್ ಕಟ್ಟಡದ ಸದಸ್ಯರು ಪ್ರತಿದಿನ ಸುಮಾರು 500 ವಲಸೆ ಭದ್ರತಾ ಸಿಬಂದಿಗಳು, ಮನೆ ನೌಕರರು, ಕನ್ಸರ್ವೆನ್ಸಿ ಸಿಬಂದಿ ಮತ್ತು ಚಾಲಕರಿಗೆ ಸ್ಥಳೀಯ ದೇವಾಲಯಗಳು ಮತ್ತು ಸುತ್ತಮುತ್ತಲಿನ ಸ್ವಯಂಸೇವಕರ ಮೂಲಕ ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೆ ಮತ್ತು ತಮ್ಮ ವೈಯಕ್ತಿಕ ಉಳಿತಾಯದಿಂದ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡುತ್ತಿದ್ದಾರೆ ಎಂದು ತಂಡದ ಸದಸ್ಯ ಪ್ರದೀಪ್‌ ಮೆನನ್‌ ಹೇಳಿದ್ದಾರೆ.

ಗೋವಂಡಿ ಪೊಲೀಸ್‌ ಠಾಣೆಯ ಕಾಸ್ಟೇಬಲ್‌ ರಾಜೇಂದ್ರ ಘೋರ್ಪಡೆ ಅವರು ಕಳೆದ ಕೆಲವು ದಿನಗಳಿಂದ ಬಡವರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸುವುದರ ಜತೆಗೆ ತಮ್ಮ ಉಳಿತಾಯದಿಂದ 25,000 ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದಾನ ಮಾಡಿದ್ದಾರೆ. ಬಾಲಿವುಡ್‌ ನಟ ನಾನಾ ಪಾಟೆಕರ್‌ ಅವರ ನಾಮ್‌ ಫೌಂಡೇಶನ್‌ ಸಿಎಂ ಪರಿಹಾರ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಿದೆ. ಇಂಟರ್‌ನ್ಯಾಷನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಷಿಯಸ್ನೆಸ್‌ ಟೆಂಪಲ…, ರಿಲಯನ್ಸ್ ಫೌಂಡೇಶನ…, ರೋಟರಿ ಕ್ಲಬ್‌ ಆಫ್ ಮುಂಬಯಿ ಕ್ವೀನ್ಸ್ ನೆಕ್ಲೆಸ್‌ ಇಸ್ಕಾನ್‌ ಅನ್ನಾಮೃತ ಜತೆಗೆ ಕೈಜೋಡಿಸಿ ಮುಂಬಯಿ, ಪಾಲ್ಗರ್‌, ಪುಣೆ, ಔರಂಗಾಬಾದ್‌, ಜಾಲಾ° ಮತ್ತು ನಾಗಪುರಗಳಲ್ಲಿ ವಲಸೆ ಬಂದವರಿಗೆ 2,25,000 ಕ್ಕೂ ಹೆಚ್ಚು ಊಟವನ್ನು ಒದಗಿಸಿದೆ.

ಲಾಕ್‌ಡೌನ್‌ ಅವಧಿಯಲ್ಲಿ 250 ಬೆಸ್ಟ್‌ ಬಸ್‌ ಚಾಲಕರು, ಕಂಡಕ್ಟರ್‌ಗಳು, ಪಾದಚಾರಿ ನಿವಾಸಿಗಳು ಮತ್ತು ವಲಸಿಗರಿಗೆ ಧರ್ಮೇಶ್‌ ಝವೇರಿ ಮತ್ತು ಭರತ್‌ ಪರೇಖ್‌ ನೇತೃತ್ವದ ವಿಲೇ ಪಾರ್ಲೆ ಜೈನ್‌ ಡೈಮಂಡ್‌ ಟ್ರೇಡರ್ಸ್‌ ಗ್ರೂಪ್‌ ವಾರಾಂತ್ಯದ ಊಟ ಮತ್ತು ಉಪಾಹಾರವನ್ನು ಆಯೋಜಿಸುತ್ತಿದೆ. ಅದೇ, ರಾಯಗಡದ 150 ವಲಸೆ ಕುಟುಂಬಗಳಿಗೆ ಆಹಾರ ಪ್ಯಾಕೆಟ್‌ಗಳನ್ನು ಒದಗಿಸಲು ಇಲ್ಲಿನ ಹಿಲ್‌ ಸ್ಪ್ರಿಂಗ್‌ ಇಂಟರ್‌ನ್ಯಾಷನಲ್‌ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಬಿಷೇಕ್‌ ಅವರ್‌ಸೇಕರ್‌ ಅವರು 1,53,000 ರೂ. ದೇಣಿಗೆ ಸಂಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next