Advertisement

ಕ್ಯಾನ್ಸರ್ ಪೀಡಿತೆಗೆ ತನ್ನ ಕೂದಲು ದಾನ ಮಾಡಿ ಮಾನವೀಯತೆ ಮೆರೆದ ಸುಳ್ಯದ ಮಹಿಳೆ

09:18 PM Aug 20, 2020 | Mithun PG |

ಸುಳ್ಯ: ಕ್ಯಾನ್ಸರ್ ಪೀಡಿತೆಗೆ ತನ್ನ ಕೂದಲು ದಾನ ಮಾಡುವ ಮೂಲಕ ಸುಳ್ಯದ ಮಹಿಳೆಯೊಬ್ಬರು ಮಾನವೀಯತೆ ಮೆರೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Advertisement

ಮೂಲತಃ ಸುಳ್ಯದವರಾಗಿರುವ, ಈಗ ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ ರೇಷ್ಮಾ ರಾಮದಾಸ್ ಅವರು ಕ್ಯಾನ್ಸರ್ ಪೀಡಿತ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿಸಲು ತನ್ನ  ಕೂದಲನ್ನು ದಾನ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ, ನನ್ನ ಸ್ನೇಹಿತೆ ತನ್ನ ಕೂದಲನ್ನು ದಾನ ಮಾಡಿದ್ದಳು, ಆಕೆಯನ್ನು ನೋಡಿ ಪ್ರೇರಣೆಗೊಂಡು ನಾನು ಕೂಡ ಕೂದಲು ದಾನ ಮಾಡಿದ್ದೇನೆ.

ಕೂದಲನ್ನು ಹೇಗೆ ದಾನ ಮಾಡಬಹುದು ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ನನಗೆ ತಿಳಿದಿರಲಿಲ್ಲ. ನನ್ನ ಪತಿ ರಾಮದಾಸ್ ಅವರು ಹೇರ್ ಬ್ಯಾಂಕ್ ಅನ್ನು ಶಿಫಾರಸು ಮಾಡಿದರು. ಹಾಗಾಗಿ ಇದು ನನ್ನ ಕೂದಲನ್ನು ದಾನ ಮಾಡಲು ಒಂದು ಸುವರ್ಣಾವಕಾಶ ಎಂದು ತಿಳಿದು, ಸಂತೋಷದಿಂದ ಒಪ್ಪಿಕೊಂಡೆ.


ಕ್ಯಾನ್ಸರ್ ರೋಗಿಗಳಿಗೆ ನಾವು ಏನನ್ನಾದರೂ ನೀಡಿದಾಗ ಅವರು ಹೇಗೆ ಸಂತೋಷ ಪಡುತ್ತಾರೆ ಎಂಬ ವೀಡಿಯೊಗಳನ್ನು ನಾನು ನೋಡಿದ್ದೆ. ಆರ್ಥಿಕವಾಗಿ ಸಹಾಯ ಮಾಡುವುದು ಸಾಧ್ಯವಿರಲಿಲ್ಲವಾದ್ದರಿಂದ, ನನ್ನ ಕೂದಲನ್ನು ತ್ರಿಶೂರ್‌ನಲ್ಲಿರುವ ಹೇರ್ ಬ್ಯಾಂಕ್‌ಗೆ ದಾನ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಲ್ಲಿ ನನ್ನ ಪತಿ ನನ್ನನ್ನು ಬೆಂಬಲಿಸಿದರು. ಕ್ಯಾನ್ಸರ್ ರೋಗಿಯ ಮುಖದಲ್ಲಿ ಮಂದಹಾಸವನ್ನು ತರುವುದಕ್ಕಾಗಿ ನನ್ನ ಕೂದಲನ್ನು ದಾನ ಮಾಡಿರುವುದರಿಂದ ನನಗೆ  ತುಂಬಾ ಸಂತೋಷ ತಂದಿದೆ ಎಂದು ರೇಷ್ಮಾ  ತಿಳಿಸಿದ್ದಾರೆ.

Advertisement

ರೇಷ್ಮಾ ತನ್ನ ಉದ್ದವಾದ ಕೇಶರಾಶಿಯ ಮುಕ್ಕಾಲು ಭಾಗವನ್ನು ಕತ್ತರಿಸಿ ನೀಡಿದ್ದಾರೆ. ಅವರ ಈ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗುತ್ತಿದೆ. ರೇಷ್ಮಾ ಅವರು ಸುಳ್ಯದ ಕೇರ್ಪಳ ನಿವಾಸಿ ರಾಮ ಪಾಟಾಳಿಯವರ ಪುತ್ರಿ. ಪತಿ ರಾಮದಾಸ್ ಅವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next