Advertisement

ರಕ್ತದಾನ ಮಾಡಿ ಜೀವಧಾತರಾಗಿ

07:41 AM Jan 26, 2019 | Team Udayavani |

ಚಿಂತಾಮಣಿ: ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೂಬ್ಬರಿಗೆ ಜೀವದಾತರಾಗಿ ಎಂದು ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಚಿಕ್ಕಬಳ್ಳಾಪುರ ಘಟಕದ ವೈದ್ಯ ತಂಡದ ಮುಖ್ಯಸ್ಥ ಡಾ.ವಿಕ್ರಮ್‌ ತಿಳಿಸಿದರು.

Advertisement

ತಾಲೂಕಿನ ಮೈಲಾಂಡ್ಲಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇಂಡಿಯನ್‌ ರೆಡ್‌ಕ್ರಾಸ್‌ ಸೊಸೈಟಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ”ರಕ್ತದಾನ ಶಿಬಿರ”ದಲ್ಲಿ ಮಾತನಾಡಿದ ಅವರು, ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಪ್ರತಿಯೊಬ್ಬರು ರಕ್ತದಾನ ಮಾಡುವ ಗುಣ ಬೆಳೆಸಿಕೊಳ್ಳುವ ಮೂಲಕ ಪರೋಪಕಾರಿತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಜಗತ್ತಿನಲ್ಲಿ ಹಣವನ್ನು ಕೊಟ್ಟು ಏನನ್ನಾದರೂ ಪಡೆಯಬಹುದು ಅಥವಾ ಉತ್ಪಾದನೆ ಮಾಡಬಹುದು. ಆದರೆ ಜೀವ ಉಳಿಸುವ ರಕ್ತವನ್ನು ಉತ್ಪಾದಿಸಲು ಸಾಧ್ಯವಿಲ್ಲ ಎಂದರು.

ಕುರುಬೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪೂರ್ಣಿಮ ಮಾತನಾಡಿದರು. ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಸದರಿ ಶಾಲೆಯ ಮುಖ್ಯ ಶಿಕ್ಷಕಿ ಹಸೀನಾ ಬೇಗಂ ಮಾತನಾಡಿದರು. ಸುಮಾರು 78 ಮಂದಿ ಯುವಕರು ರಕ್ತದಾನ ಮಾಡಿದರು. ಶಿಬಿರದಲ್ಲಿ ಒಟ್ಟು 78 ಯುನಿಟ್ ರಕ್ತ ಸಂಗ್ರಹಿಸಿ ರೆಡ್‌ಕ್ರಾಸ್‌ ಸಂಸ್ಥೆಗೆ ಹಸ್ತಾಂತರಿಸಲಾಯಿತು. ವೈದ್ಯಾ ಧಿಕಾರಿ ಡಾ.ವಿಕ್ರಂ ಹಾಗೂ ಸಂಸ್ಥೆಯ ತಂಡದವರು ಶಿಬಿರ ನಿರ್ವಹಿಸಿದರು. ಶಾಲೆಯ ಭೋದಕ ಶಿಕ್ಷಕರಾದ ಮಾರಪ್ಪರೆಡ್ಡಿ, ಮುನಿಯಮ್ಮ, ಎಸ್‌.ಪಿ.ರಮೇಶ್‌, ಕುರುಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next