Advertisement

ಗನ್‌ ಲೈಸೆನ್ಸ್‌ ಬೇಕಿದ್ರೆ, ಹಸುವಿಗೆ ಹೊದಿಕೆ ಕೊಡಿ!

10:02 AM Dec 16, 2019 | Hari Prasad |

ಗ್ವಾಲಿಯರ್‌: ನಿಮಗೆ ಗನ್‌ ಲೈಸೆನ್ಸ್‌ ಬೇಕೇ? ಹಾಗಿದ್ದರೆ, ಗೋಶಾಲೆಯಲ್ಲಿರುವ ಹಸುಗಳಿಗೆ 10 ಹೊದಿಕೆಗಳನ್ನು ದೇಣಿಗೆ ನೀಡಿ! ಇಂಥದ್ದೊಂದು ನಿಯಮ ಮಧ್ಯಪ್ರದೇಶದ ಗ್ವಾಲಿಯರ್‌ ಜಿಲ್ಲೆಯಲ್ಲಿ ಜಾರಿಗೆ ಬಂದಿದೆ. ಇಲ್ಲಿನ ಜಿಲ್ಲಾಧಿಕಾರಿ ಅನುರಾಗ್‌ ಚೌಧರಿ ಈ ಘೋಷಣೆ ಮಾಡಿದ್ದಾರೆ.

Advertisement

ಗೋಲಾ ಕಾ ಮಂದಿರ್‌ ಎಂಬ ಪ್ರದೇಶದಲ್ಲಿರುವ ಸ್ಥಳೀಯಾಡಳಿತ ನಿರ್ವಹಿಸುತ್ತಿರುವ ಗೋಶಾಲೆಯಲ್ಲಿ ಇತ್ತೀಚೆಗೆ ಭಾರೀ ಚಳಿ ತಾಳಲಾರದೇ 6 ಹಸುಗಳು ಸಾವನ್ನಪ್ಪಿದ್ದವು. ಇಲ್ಲಿಗೆ ಭೇಟಿ ನೀಡಿದ ಚೌಧರಿ ಅವರು, ಇನ್ನು ಮುಂದೆ ಯಾರಾದರೂ ಗನ್‌ ಪರವಾನಗಿಗೆ ಅರ್ಜಿ ಸಲ್ಲಿಸುವುದಿದ್ದರೆ, ಮೊದಲು ಇಲ್ಲಿನ ಹಸುಗಳನ್ನು ಚಳಿಯಿಂದ ರಕ್ಷಿಸುವಂಥ ಹೊದಿಕೆಗಳನ್ನು ದಾನವಾಗಿ ನೀಡಬೇಕು. ಹಾಗೆ ಮಾಡಿದವರಿಗೆ ಮಾತ್ರವೇ ಲೈಸೆನ್ಸ್‌ ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next