ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಲೀಕತ್ವದ “ಟ್ರೂತ್ ಸೋಶಿಯಲ್’ ಆ್ಯಪ್ ಬಗ್ಗೆ ಭಾರೀ ಬೇಡಿಕೆ ಉಂಟಾಗಿದೆ.
ಸೋಮವಾರ ಲೋಕಾರ್ಪಣೆಗೊಂಡ ಬಳಿಕ ಆ್ಯಪಲ್ ಸ್ಟೋರ್‌ನಿಂದ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಡೌನ್‌ಲೋಡ್ ಆಗಿರುವ ಆ್ಯಪ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಲೋಕಾರ್ಪಣೆಗೊಳ್ಳುವ ಮುನ್ನವೇ ಅದನ್ನು ಡೌನ್‌ಲೌಡ್ ಮಾಡಿಕೊಳ್ಳುವ ಬಗ್ಗೆ ಅಲರ್ಟ್ ನೀಡಿದ್ದವರಿಗೆ ಸುಲಭವಾಗಿಯೇ ದೊರಕಿದೆ. ಆರಂಭದಲ್ಲಿಯೇ ಆ್ಯಪ್‌ಗೆ ಡೌನ್‌ಲೋಡ್ ಮಾಡಿದವರಿಗೆ ರಿಜಿಸ್ಟರ್ ಆಗಲು ಅಸಾಧ್ಯವಾದದ್ದು ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳು ಎದುರಾಗಿವೆ.
ಇದನ್ನೂ ಓದಿ:ಮೈದಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು : ಕ್ರಿಕೆಟ್ ಆಡುತ್ತಿದ್ದಾಗ ನಡೆದ ದುರ್ಘಟನೆ
ಕಳೆದ ವರ್ಷದ ಜನವರಿಯಲ್ಲಿ ಕ್ಯಾಪಿಟಲ್ ಹಿಲ್ ಗಲಭೆಯ ಬಳಿಕ ಟ್ರಂಪ್ ಅವರನ್ನು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಿಂದ ಹೊರ ಹಾಕಲಾಗಿತ್ತು.