ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಫೆ.24) ರಂದು ಭಾರತಕ್ಕೆ ಆಗಮಿಸಲಿದ್ದು ಹಲವೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಟ್ರಂಪ್ ಭೇಟಿ ನೀಡಲಿರುವ ಪ್ರಮುಖ ಸ್ಥಳಗಳಲ್ಲಿ ಒಂದಾದ ಆಗ್ರಾದಲ್ಲಿ ಲಂಗೂರ್ (ಉದ್ದನೇಯ ಬಾಲದ ಮಂಗಗಳು) ಗಳನ್ನು ಕೂಡ ನಿಯೋಜಿಸಲಾಗಿದೆ.
ಹೌದು. ಆಗ್ರಾದಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು , ರಕ್ಷಾಣಾ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ಭದ್ರತಾ ಏರ್ಪಾಟು ಮಾಡಿದರೂ ಕೋತಿಗಳನ್ನು ನಿಯಂತ್ರಿಸುವುದು ಕಷ್ಟ. ಯಾಕೆಂದರೇ ಅವುಗಳ ಮೇಲೆ ಹಲ್ಲೆ ಮಾಡುವುದು ಕೂಡ ಕಾನೂನಿನ ಪ್ರಕಾರ ಅಪರಾಧ. ಹೀಗಾಗಿ ಅವುಗಳನ್ನು ನಿಯಂತ್ರಿಸಲು ರಕ್ಷಣಾ ದಳ ಐದು ಲಂಗೂರ್ ಗಳನ್ನು ನಿಯೋಜಿಸಿವೆ.
ಸಾಮಾನ್ಯ ಪ್ರಭೇದದ ಮಂಗಗಳು ಈ ಲಂಗೂರ್ಗಳಿಗೆ ಹೆದರುತ್ತವೆ. ಲಂಗೂರ್ಗಳು ಸಾಮಾನ್ಯ ಕೋತಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಅಲ್ಲದೆ ತುಂಬ ಆಕ್ರಮಣಶೀಲವಾಗಿರುತ್ತದೆ. ಅವುಗಳನ್ನು ಕಂಡರೆ ಕೋತಿಗಳು ಹತ್ತಿರ ಬರುವುದಿಲ್ಲ. ಇದೇ ಕಾರಣಕ್ಕೆ ಭದ್ರತಾ ದಳಗಳು ಈ ಯೋಜನೆ ರೂಪಿಸಿವೆ.