Advertisement

ಗ್ರೀನ್‌ ಕಾರ್ಡ್‌ ನೀತಿ ಬದಲು

10:55 AM Feb 10, 2018 | Team Udayavani |

ವಾಷಿಂಗ್ಟನ್‌: ಗ್ರೀನ್‌ ಕಾರ್ಡ್‌ ನೀಡುವ ಲಾಟರಿ ವ್ಯವಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಹತ್ವದ ಬದಲಾವಣೆ ಮಾಡಿದ್ದು, ಇದರಿಂದಾಗಿ ಭಾರತೀಯರಿಗೆ ಭಾರೀ ಅನುಕೂಲವಾಗಲಿದೆ. ಸದ್ಯ ಗ್ರೀನ್‌ಕಾರ್ಡ್‌ ಪಡೆಯಲು 70 ವರ್ಷಗಳವರೆಗೆ ಕಾಯಬೇಕಾಗಿದ್ದು, ಇದಕ್ಕೆ ದೇಶವೊಂದಕ್ಕೆ ವಾರ್ಷಿಕ ಮಿತಿ ಹೇರಿಕೆ ಹಾಗೂ ಲಾಟರಿ ವ್ಯವಸ್ಥೆಯೇ ಕಾರಣವಾಗಿತ್ತು. ಈ ನೀತಿಗೆ ಬದಲಾವಣೆ ಮಾಡಿರುವ ಟ್ರಂಪ್‌ ಆಡಳಿತ, ದೇಶಕ್ಕೆ ಮಿತಿ ವಿಧಿಸುವುದರ ಬದಲಿಗೆ ಮೆರಿಟ್‌ ವಿಧಾನ  ಅನುಸರಿಸಲು ನಿರ್ಧರಿಸಲಾಗಿದೆ. ಇದರಿಂದ ಪ್ರತಿಭೆ ಇರುವವರಿಗೆ ಮತ್ತು ಉದ್ಯೋಗ ಆಧರಿತ ವ್ಯಕ್ತಿಗಳಿಗೆ ಗ್ರೀನ್‌ ಕಾರ್ಡ್‌ ಲಭಿಸಲಿದೆ. ಇದು ಭಾರತೀಯರಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿ ವರ್ಷ ಸುಮಾರು 50 ಸಾವಿರ ಗ್ರೀನ್‌ಕಾರ್ಡ್‌ಗಳನ್ನು ಅಮೆರಿಕ ವಿವಿಧ ದೇಶದ ಜನರಿಗೆ ಲಾಟರಿ ಮೂಲಕ ನೀಡುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next