ವಾಷಿಂಗ್ಟನ್: ಪ್ಯಾರಿಸ್ ಜಾಗತಿಕ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರಬರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ. ಮಾತ್ರವಲ್ಲದೆ ಒಪ್ಪಂದದಿಂದ ಚೀನಾ, ಭಾರತದಂತಹ ದೇಶಗಳಿಗೆ ಮಾತ್ರ ಲಾಭವಾಗಲಿದೆ.ಒಪ್ಪಂದದಿಂದ ಅಮೆರಿಕದ ವ್ಯಾಪಾರ ಮತ್ತು ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ನಮ್ಮ ದೇಶಕ್ಕೆ ಒಪ್ಪಂದ ಬೇಕಿಲ್ಲ ಎಂದಿದ್ದಾರೆ.
ಒಪ್ಪಂದದಿಂದ ಅಧಿಕೃತವಾಗಿ ಹೊರಬಂದಿರುವುದಾಗಿ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಬರಾಕ್ ಒಬಾಮಾ ಸರ್ಕಾರ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಬದಲಾವಣೆ ಮಾಡಲು ಅವಕಾಶವಿತ್ತು ಎಂದು ಪ್ರತಿಪಾದಿಸಿದ್ದಾರೆ.
ಪ್ಯಾರಿಸ್ ಒಪ್ಪಂದದಡಿ ತನ್ನ ಬದ್ಧತೆಯನ್ನು ಈಡೇರಿಸಲು ಭಾರತ ಶತಕೋಟಿ ಡಾಲರ್ ಪಡೆದುಕೊಳ್ಳಲಿದೆ. ಮಾತ್ರವಲ್ಲದೆ ಚೀನಾದೊಂದಿಗೆ 2020 ರ ವೇಳೆಗೆ ಕಲ್ಲಿದ್ದಲು ಆಧಾರಿತ ಇಂಧನ ಘಟಕಗಳಿಗೆ ದ್ವಿಗುಣ ಮೊತ್ತದ ಹಣ ಪಡೆದುಕೊಳ್ಳಲಿದೆ ಎಂದರು.
ಜಾಗತಿಕ ಹವಾಮಾನದಿಂದ ಆಗುವ ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈಗ ಅಮೆರಿಕ ಈ ತೀರ್ಮಾನಕ್ಕೆ ಬಂದಿರುವುದು ಟ್ರಂಪ್ ಅವರ ಏಕಮುಖ ನಿರ್ಧಾರಗಳಿಗೆ ಮತ್ತೂಂದು ಸಾಕ್ಷಿ ಎನ್ನಲಾಗುತ್ತಿದೆ.
ಐರೋಪ್ಯ ಒಕ್ಕೂಟದಿಂದ ಖಂಡನೆ
ಶ್ವೇತಭವನದ ಈ ನಿರ್ಧಾರಕ್ಕೆ ಐರೋಪ್ಯ ಒಕ್ಕೂಟ ತೀವ್ರ ಖಂಡನೆ ವ್ಯಕ್ತಪಡಿಸಿವೆ. ಬರಾಕ್ ಒಬಾಮಾ ಟ್ರಂಪ್ ಕೈಗೊಂಡಿರುವ ಈ ನಿರ್ಧಾರ ಅಮೆರಿಕ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಿ ಪರಿಣಮಿಸಲಿದೆ ಎಂದಿದ್ದಾರೆ.
190 ಕ್ಕೂ ಅಧಿಕ ದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿವೆ.