Advertisement

ಸಬರಮತಿ ಆಶ್ರಮಕ್ಕೆ ಟ್ರಂಪ್‌ ಭೇಟಿ ಅನುಮಾನ

10:05 AM Feb 22, 2020 | Sriram |

ಅಹಮದಾಬಾದ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ಖಚಿತಗೊಂಡಿಲ್ಲ. ಸಬರಮತಿ ಆಶ್ರಮ ಟ್ರಂಪ್‌ ಭೇಟಿಯ ಪಟ್ಟಿಯಲ್ಲಿದ್ದರೂ ಈ ಕುರಿತಂತೆ ಇನ್ನೂ ಸ್ಪಷ್ಟ ಕಾರ್ಯ ಸೂಚಿ ಬಿಡುಗಡೆಯಾಗಿಲ್ಲ ಎನ್ನಲಾಗುತ್ತಿದೆ. ಈ ಕುರಿತಂತೆ ಮಾತನಾಡಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು, ಈ ಕುರಿತಂತೆ ಏನೇ ಬಳಿಕದ ಯೋಜನೆ ಇದ್ದರೂ ಶ್ವೇತ ಭವನ ಅದನ್ನು ನಿರ್ಧರಿಸುತ್ತದೆ ಎಂದಿದ್ದಾರೆ.

Advertisement

ಟ್ರಂಪ್‌ ಅವರು ಮಹಾತ್ಮ ಗಾಂಧಿ ಅವರ ಸಬರಮತಿ ಆಶ್ರಮಕ್ಕೆ ಭೇಟಿ ನೀಡುವ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ. ಈ ಹಿಂದೆ ನಿರ್ಧಾರವಾದಂತೆ ಟ್ರಂಪ್‌ ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಸಬರಮತಿ ಆಶ್ರಮಕ್ಕೆ ತೆರಳಿ ಅಲ್ಲಿ 30 ನಿಮಿಷ ಇರುವ ಯೋಜನೆಯಲ್ಲಿದ್ದರು. ಇದಕ್ಕಾಗಿ ಅಲ್ಲಿ ಬಹುತೇಕ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಈಗಿರುವ ಮಾಹಿತಿ ಪ್ರಕಾರ ಟ್ರಂಪ್‌ ವಾಷಿಂಗ್ಟನ್‌ ವಿಮಾನ ನಿಲ್ದಾಣದಿಂದ ನೇರವಾಗಿ ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಲಿದ್ದಾರೆ.

ಅಲ್ಲಿಂದ ಪ್ರಧಾನಿ ಮೋದಿ ಅವರ ರೋಡ್‌ಶೋ ನಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮೊಟೇರಾ ಸ್ಟೇಡಿಯಂಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ದಿಲ್ಲಿಗೆ ತೆರಳಿ ತಾಜ್‌ಮಹಲ್‌ ವೀಕ್ಷಿಸಲಿದ್ದಾರೆ. ಈ ಪರಿಷ್ಕೃತ ಕಾರ್ಯ ಯೋಜನೆಯಲ್ಲಿ ಸಾಬರಮತಿ ಆಶ್ರಮದ ಉಲ್ಲೇಖ ಇಲ್ಲ ಎನ್ನಲಾಗುತ್ತಿದೆ. ಇಲ್ಲಿಗೆ ಭೇಟಿ ನೀಡಿದರೆ ರೋಡ್‌ಶೋಗೆ ಸಮಯ ಹೊಂದಾಣಿಸುವುದು ಕಷ್ಟ ಎಂಬ ಕಾರಣಕ್ಕೆ ಪಟ್ಟಿಯಿಂದ ಹೊರಗಿಡಲಾಗಿದೆ. ಒಂದು ವೇಳೆ ಟ್ರಂಪ್‌ ಭೇಟಿ ನೀಡಿದರೆ, ಮಹಾತ್ಮ ಗಾಂಧೀಜಿ ಅವರ ಆತ್ಮ ಚರಿತ್ರೆ ಹಾಗೂ ಚರಕವನ್ನು ನೀಡಲು ಎಲ್ಲವೂ ಸಿದ್ಧಗೊಂಡಿದೆ.

ಮಹಾತ್ಮ ಗಾಂಧೀಜಿ ಅವರು ತಮ್ಮ ಅಹಿಂಸಾ ಸತ್ಯಾಗ್ರಹವನ್ನು ಆರಂಭಿಸಿದ ಆಶ್ರಮ ಇದಾಗಿದ್ದು, ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ಈ ಹಿಂದೆ ಇಲ್ಲಿಗೆ ಭೇಟಿಕೊಟ್ಟಿದ್ದರು. ಚೀನದ ಕ್ಸಿ ಜಿಂಪಿಗ್‌, ಜಪಾನಿನ ಶಿನ್ಸೋ ಅಬೆ, ಇಸ್ರೇಲ್‌ನ ಬೆಂಜಮಿನ್‌ ನೆತಾಹ್ಯೂ ಮೊದಲಾದ ನಾಯಕರು ಭೇಟಿ ಕೊಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next