Advertisement

IBRD ಪ್ರತಿನಿಧಿಯಾಗಿ ಭಾರತೀಯ ಮೂಲದವರನ್ನು ನಾಮನಿರ್ದೇಶನಗೊಳಿಸಿದ ಟ್ರಂಪ್

02:33 AM May 07, 2020 | Hari Prasad |

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತೀಯ ಮೂಲದ ವಕೀಲ ಅಶೋಕ್‌ ಮೈಕೆಲ್‌ ಪಿಂಟೊ ಅವರನ್ನು ಪುನರ್‌ನಿರ್ಮಾಣ ಹಾಗೂ ಅಭಿವೃದ್ಧಿ ಅಂತಾರಾಷ್ಟ್ರೀಯ ಬ್ಯಾಂಕ್‌ (ಐಬಿಆರ್‌ಡಿ) ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಪ್ರತಿನಿಧಿಯಾಗಿ ನಾಮನಿರ್ದೇಶನ ಮಾಡಿದ್ದಾರೆ.

Advertisement

ಮುಂದಿನ ಎರಡು ವರ್ಷಗಳ ಅವಧಿಗೆ ಪಿಂಟೋ ಪರ್ಯಾಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ. ಈ ಬಗ್ಗೆ ಎ. 9ರಂದು ಟ್ರಂಪ್‌ ಆದೇಶ ಹೊರಡಿಸಿದ್ದರು.

ಕೋರ್ಟ್‌ಗೆ ನೇಮಕ: ಮತ್ತೂಂದು ಬೆಳವಣಿಗೆಯಲ್ಲಿ ಭಾರತೀಯ ಅಮೆರಿಕನ್‌ ನ್ಯಾಯವಾದಿ ಸರಿತಾ ಕೋಮಟಿ ರೆಡ್ಡಿ ಅವರನ್ನು ನ್ಯೂಯಾರ್ಕ್‌ ನಲ್ಲಿರುವ ಪೂರ್ವ ಜಿಲ್ಲಾ ಕೋರ್ಟ್‌ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. ಈ ಬಗ್ಗೆಯೂ ಅಧ್ಯಕ್ಷ ಟ್ರಂಪ್‌ ಅನುಮೋದನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next