ನ್ಯೂಯಾರ್ಕ್:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಂಧನ ಸಾಧ್ಯತೆ ಅಧಿಕವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
2016ರ ಅಧ್ಯಕ್ಷೀಯ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ಚಿತ್ರನಟಿ ಸ್ಟಾರ್ಮಿ ಡೇನಿಯೆಲ್ಸ್ ಜೊತೆಗೆ ದೈಹಿಕ ಸಂಪರ್ಕ ಹೊಂದಿದ್ದರು ಎಂಬ ವಿಚಾರ ಚರ್ಚೆಗೆ ಬಂದಿತ್ತು. ಅದರ ಬಗ್ಗೆ ಬಾಯಿ ಬಿಡದಂತೆ 1,30,000 ಡಾಲರ್ ಮೊತ್ತ ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಲೋಯರ್ ಮ್ಯಾನ್‌ಹಟನ್ ಕೋರ್ಟ್ ಶೀಘ್ರದಲ್ಲಿಯೇ ತೀರ್ಪು ಪ್ರಕಟಿಸಲಿದೆ. ಒಂದು ವೇಳೆ ಟ್ರಂಪ್ ಬಂಧನ ಆಗಿದ್ದೇ ಆದರೆ, ಅಮೆರಿಕದ ಇತಿಹಾಸದಲ್ಲಿಯೇ ಬಂಧನಕ್ಕೆ ಒಳಗಾದ ಮೊದಲ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೂ ಅವರು ಪಾತ್ರರಾಗಲಿದ್ದಾರೆ. ಒಂದುವೇಳೆ ಟ್ರಂಪ್ ತಪ್ಪಿತಸ್ಥರೆಂದು ಕೋರ್ಟ್ ಪ್ರಕಟಿಸಿದರೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಈಗಾಗಲೇ ಸಿದ್ಧತೆ ನಡೆಸಿದ್ದಾರೆ. 2024ರ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ.
ಹಿಂಸಾಚಾರ ಖಚಿತ:
ಒಂದು ವೇಳೆ ತಮ್ಮನ್ನು ತಪ್ಪಿತಸ್ಥ ಎಂದು ಘೋಷಣೆ ಮಾಡಿದರೆ ನ್ಯೂಯಾರ್ಕ್‌ನಲ್ಲಿ ಹಿಂಸಾಚಾರ ನಡೆದು, ಸಾವು ನೋವು ಉಂಟಾಗಲಿದೆ. ಜತೆಗೆ ಅಲ್ಲೋಲಕಲ್ಲೋಲ ಸ್ಥಿತಿ ಉಂಟಾಗಲಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ತಮ್ಮದೇ ಆಗಿರುವ ಟ್ರಾಥ್ ಸೋಷಿಯಲ್ ಸಾಮಾಜಿಕ ತಾಣದಲ್ಲಿ, ಬರೆದುಕೊಂಡಿರುವ ಅವರು, ಕೋರ್ಟ್‌ನ ಮುಖ್ಯ ಜ್ಯೂರಿ ವಿರುದ್ಧವೂ ಹರಿಹಾಯ್ದಿದ್ದಾರೆ. ಒಮ್ಮೆಯಂತೂ, ಜ್ಯೂರಿ ಆಲ್ವಿನ್ ಬ್ರ್ಯಾಗ್ ತಲೆ ಹಿಂಭಾಗ ಬೇಸ್‌ಬಾಲ್ ಬ್ಯಾಟನ್ನು ತಾವೇ ಕೆತ್ತುತ್ತಿರುವ ಚಿತ್ರವನ್ನು ಟ್ರಂಪ್ ಹಾಕಿಕೊಂಡಿದ್ದಾರೆ.