Advertisement

ಭಾರತಕ್ಕೆ ಭೇಟಿ ನೀಡಲು ಕಾತುರನಾಗಿದ್ದೇನೆ: ಬಾಹುಬಲಿ ಎಡಿಟೆಡ್ ವಿಡಿಯೋ ಹಂಚಿಕೊಂಡ ಟ್ರಂಪ್

10:13 AM Feb 24, 2020 | Mithun PG |

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಭಾರತಕ್ಕೆ ತಮ್ಮ ಬಹು ನಿರೀಕ್ಷಿತ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು “ಭಾರತದಂತಹ ಉತ್ತಮ ಸ್ನೇಹಿತರ ಜೊತೆ ಇರಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದಾರೆ.

Advertisement

ಪ್ರಭಾಸ್ ನಟನೆಯ ಬಾಹುಬಲಿ ಸಿನಿಮಾದ ವಿಡಿಯೋದ ತುಣುಕೊಂದಕ್ಕೆ ಡೊನಾಲ್ಡ್ ಟ್ರಂಪ್, ಇವಾಂಕ ಟ್ರಂಪ್, ಮೆಲೇನಿಯಾ ಟ್ರಂಪ್ ಮಾತ್ರವಲ್ಲದೆ ಪ್ರಧಾನಿ ಮೋದಿ ಹಾಗೂ ಜಶೋಧಾ ಬೆನ್ ಅವರ ಮುಖವನ್ನು ಹೊಂದಿಸಲಾಗಿತ್ತು. Sol ಎಂಬ ವೆರಿಫೈ ಆಗದ ಖಾತೆಯಲ್ಲಿದ್ದ ಈ ವಿಡಿಯೋವನ್ನು ಟ್ರಂಪ್ ಹಂಚಿಕೊಂಡು  ಭಾರತಕ್ಕೆ ಭೇಟಿ ನೀಡುವ ಕುರಿತು ಟ್ರಂಪ್ ಹರ್ಷ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಫೋಸ್ಟ್ ಗೆ 60 ಸಾವಿರಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15 ಸಾವಿರ ಮಂದಿ ರೀಟ್ವೀಟ್ ಮಾಡಿದ್ದು 7 ಸಾವಿರ ಕಮೆಂಟ್ ಗಳು ಬಂದಿವೆ.

 

Advertisement

ಈ ಪೋಸ್ಟ್ ಗೆ ಮೆಚ್ಚುಗೆ, ಆಕ್ಷೇಪ, ವ್ಯಂಗ್ಯವೂ ಕೇಳಿ ಬಂದಿದ್ದು. ಇದುವರೆಗಿನ ನಿಮ್ಮ ಪೋಸ್ಟ್ ಗಳ ಪೈಕಿ ಅತ್ಯಂತ ಕಳಪೆಯದ್ದು ಎಂದು ಒಬ್ಬರು ಅಭಿಪ್ರಾಯಪಟ್ಟರೆ, ಈ ಪೋಸ್ಟ್ ಅಧ್ಬುತವಾಗಿದೆ, ಅತ್ಯಂತ ಕ್ರಿಯಾಶೀಲವಾಗಿದೆ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕೆಲವೇ ದಿನಗಳ ಹಿಂದೆ ಬಿಡುಗಡೆಯಾದ ಶುಭ್ ಮಂಗಲ್ ಜ್ಯಾದಾ ಸಾವ್ದಾನ್ ಚಿತ್ರವನ್ನು ಕೂಡ ಟ್ರಂಪ್ ಶ್ಲಾಘಿಸಿದ್ದರು.

ಅಮೆರಿಕ ಅಧ್ಯಕ್ಷ ಟ್ರಂಪ್  ಸೋಮವಾರ ಮಧ್ಯಾಹ್ನದ ವೇಳೆಗೆ ಗುಜರಾತ್‌ ನ ಅಹಮದಾಬಾದ್‌ಗೆ ಆಗಮಿಸಲಿದ್ದು, ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ  100,000 ಕ್ಕೂ ಹೆಚ್ಚು ಜನರ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next