Advertisement

ಅಶ್ಲೀಲ ಚಿತ್ರ ನಟಿಗೆ ಹಣ ನೀಡಿದ ಪ್ರಕರಣ: ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್‌ ಸೆರೆ

01:36 AM Apr 05, 2023 | Team Udayavani |

ನ್ಯೂಯಾರ್ಕ್‌: ಅಶ್ಲೀಲ ಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ ಜತೆಗೆ ಇದ್ದ ಸಂಬಂಧ ಮುಚ್ಚಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಆ ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಂಧನಕ್ಕೆ ಒಳಾಗದ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೂ ಪಾತ್ರರಾಗಿದ್ದಾರೆ. ಬಿಗಿ ಬಂದೋಬಸ್ತ್ ನಲ್ಲಿ ನ್ಯೂಯಾರ್ಕ್‌ನ ಲೋವರ್‌ ಮ್ಯಾನ್‌ಹಾಟನ್‌ ಕೋರ್ಟ್‌ಗೆ ಅವರು ಆಗಮಿಸುತ್ತಿದ್ದಂತೆಯೇ ಪೊಲೀಸರು ಅವರನ್ನು ಬಂಧಿಸಿದ್ದಾರೆ.

Advertisement

ಜತೆಗೆ ಅವರು ನ್ಯಾಯಾಧೀಶ ಜುವಾನ್‌ ಮೆರ್ಕಾನ್‌ ಮುಂದೆ ಶರಣಾಗಿದ್ದಾರೆ. ನ್ಯಾಯಾಧೀಶರ ಮುಂದೆ ವಾದಿಸಿದ ಟ್ರಂಪ್‌ ಪರ ವಕೀಲರು ತಮ್ಮ ಕಕ್ಷಿದಾರ ಪ್ರಕ ರಣದಲ್ಲಿ ನಿರಪರಾಧಿ ಎಂದು ಅರಿಕೆ ಮಾಡಿಕೊಂಡಿದ್ದಾರೆ. ಜತೆಗೆ ಕೋರ್ಟ್‌ನಲ್ಲಿ ಅವರ ವಿರುದ್ಧ ಹೊರಿಸಲಾಗಿರುವ ಆರೋಪಗಳನ್ನು ಓದಿ ಹೇಳಲಾಯಿತು. ಆದರೆ, ಎಲ್ಲಾ ಆರೋಪಗಳನ್ನು ನಿರಾಕರಿಸಿದರು.

2024ರಲ್ಲಿ ನಡೆಯುವ ಅಧ್ಯಕೀಯ ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ. 2006ರಲ್ಲಿ ಅಶ್ಲೀಲ ಚಿತ್ರ ನಟಿ ಸ್ಟಾರ್ಮಿ ಡೇನಿಯಲ್ಸ್‌ ತನಗೆ ಡೊನಾಲ್ಡ್‌ ಟ್ರಂಪ್‌ ಜತೆಗೆ ಸಂಬಂಧ ಇತ್ತು ಎಂದು ಹೇಳಿಕೊಂಡಿದ್ದರು. 2016ರಲ್ಲಿ ಸಂಬಂಧ ಮುಚ್ಚಿಡುವ ಬಗ್ಗೆ ಅವರು 1,30,000 ಅಮೆರಿಕನ್‌ ಡಾಲರ್‌ ನೀಡಿದ್ದ ಅಂಶ ಬೆಳಕಿಗೆ ಬಂದಿತ್ತು.

ಶಕ್ತಿ ಪ್ರದರ್ಶನ: ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಮ್ಮ ಮಾಲೀಕತ್ವದ ಟ್ರಂಪ್‌ ಟವರ್‌ನಿಂದ ಹತ್ತು ಕಿಮೀ ದೂರ ಇರುವ ಲೋವರ್‌ ಮ್ಯಾನ್‌ಹಟನ್‌ನ ಕೋರ್ಟ್‌ ವರೆಗೆ ಬೆಂಬಲಿಗರ ಜತೆಗೆ ಆಗಮಿಸಿದ್ದಾರೆ.

ಎಲ್ಲೆಲ್ಲೂ ಬೆಂಬಲಿಗರು: ರಿಪಬ್ಲಿಕನ್‌ ಪಕ್ಷದ ಬೆಂಬ ಲಿಗರೆಲ್ಲರೂ ನೂರಾರು ಮಂದಿ ಕೋರ್ಟ್‌ ಆವರಣದ ಬಳಿ ಸೇರಿದ್ದರು. ಜತೆಗೆ ಕೋರ್ಟ್‌ ಹೊರಭಾಗದಲ್ಲಿ ಬೆಂಬಲಿಗರು ತಮ್ಮ ನಾಯಕ ನಿರಪರಾಧಿ ಎಂದು ಮುದ್ರಿಸಿರುವ ಟಿಶರ್ಟ್‌ಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುತ್ತಿದ್ದರು.

Advertisement

ಟ್ರಂಪ್‌ ಕೇಸು ಆದ್ಯತೆ ಅಲ್ಲ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಮಾಜಿ ಅಧ್ಯಕ್ಷರ ವಿರುದ್ಧ ನಡೆಯು ತ್ತಿರುವ ಕಾನೂನು ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ವಕ್ತಾರರು ತಿಳಿಸಿದ್ದಾರೆ. ಆದರೆ ಟ್ರಂಪ್‌ ವಿರುದ್ಧ ಕೈಗೊಳ್ಳಲಾಗುತ್ತಿರುವ ಕಾನೂನು ಪ್ರಕ್ರಿಯೆಗಳು ಪ್ರಧಾನ ಆದ್ಯತೆ ಅಲ್ಲ ಎಂದು ಅವರು ಹೇಳಿದ್ದಾರೆ.

ಸ್ಪರ್ಧೆಗೆ ಅಡ್ಡಿ ಇಲ್ಲ: ಕುತೂಹಲಕಾರಿ ಅಂಶವೆಂದರೆ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕೋರ್ಟ್‌ ನಲ್ಲಿ ಅವರ ವಿರುದ್ಧ ಯಾವ ರೀತಿಯ ತೀರ್ಮಾನ ಹೊರಬಿದ್ದರೂ 2024ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇದೆ. ಈ ಬಗ್ಗೆ ಬಹಳ ದಿನಗಳಿಂದ ಅಮೆರಿಕದಾದ್ಯಂತ ಚರ್ಚೆಗಳು ನಡೆದಿವೆ.

ಮುಖ್ಯಾಂಶಗಳು
2006 – ಟ್ರಂಪ್‌ ಜತೆ ಭೇಟಿಯಾಗಿದ್ದನ್ನು ಹೇಳಿ ಕೊಂಡ ನಟಿ ಸ್ಟಾರ್ಮಿ
2011 – ಸಂಬಂಧ ಇದ್ದುದರ ಬಗ್ಗೆ ಹೇಳಿಕೆ.
2016 – ಸಂಬಂಧ ಮುಚ್ಚಿಡಲು ಟ್ರಂಪ್‌ ಹಣ ಪಾವತಿಸಿದ್ದ ವಿಚಾರ ಬಹಿರಂಗ
2023 – ಜನವರಿ- ಜ್ಯೂರಿಗಳ ಮುಂದೆ ಟ್ರಂಪ್‌ ವಿರುದ್ಧ ಸಾಕ್ಷ್ಯ ಮಂಡನೆ. ಮಾರ್ಚ್‌ ನಲ್ಲಿ ತಪ್ಪಿತಸ್ಥ ಎಂದು ತೀರ್ಪು

Advertisement

Udayavani is now on Telegram. Click here to join our channel and stay updated with the latest news.

Next