Advertisement

ಅಮೆರಿಕ : ಫೋನ್‌ ವರದಿ ಸುಳ್ಳು

06:00 AM Oct 27, 2018 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೂರು ಮೊಬೈಲ್‌ ಫೋನ್‌ ಬಳಸುತ್ತಿದ್ದಾರೆ ಎಂಬ  “ದಿ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆ ವರದಿಯನ್ನು ಶ್ವೇತ ಭವನ ತಿರಸ್ಕರಿಸಿದೆ.

Advertisement

ಅವರ ಬಳಿ ಸರಕಾರದ ವತಿಯಿಂದ ನೀಡಲಾಗಿರುವ ಐಫೋನ್‌ ಮಾತ್ರ ಇದೆ ಎಂದು ಸ್ಪಷ್ಟನೆ ನೀಡಿದೆ. ಟ್ರಂಪ್‌ ಅವರು ಅಸುರಕ್ಷಿತ ಮೊಬೈಲ್‌ ಫೋನ್‌ ಬಳಸುತ್ತಿರುವುದರಿಂದ ಚೀನ ಮತ್ತು ರಷ್ಯಾ ಅಧ್ಯಕ್ಷರ ಫೋನ್‌ ಕದ್ದಾಲಿಸುತ್ತಿವೆ ಎಂದು ಪತ್ರಿಕೆ ವರದಿ ಮಾಡಿತ್ತು.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ವೇತ ಭವನ ಟ್ರಂಪ್‌ ಮೊಬೈಲ್‌ ಬಳಕೆ ಮಾಡುವುದೇ ಇಲ್ಲ ಎಂದಿದೆ. ಜತೆಗೆ ಅಧ್ಯಕ್ಷ ಟ್ರಂಪ್‌ ಕೂಡ ಟ್ವೀಟ್‌ ಮಾಡಿ ಅದೊಂದು ಸುಳ್ಳು ಸುದ್ದಿ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next