Advertisement

ಮುಖ್ಯಸ್ಥರಾಗಿ ಭಾರತೀಯ ನೇಮಕ

06:00 AM Aug 09, 2018 | Team Udayavani |

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ದೇಶದ ಗೌಪ್ಯ ಮತ್ತು ನಾಗರಿಕ ಹಕ್ಕು ರಕ್ಷಣಾ ಸಂಸ್ಥೆಗೆ ಭಾರತೀಯ ಮೂಲದ ಕಾನೂನು ಪ್ರಾಧ್ಯಾಪಕ ಆದಿತ್ಯ ಬಮ್‌ಜೈ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಆದಿತ್ಯ ಬಮ್‌ಜೈ ವರ್ಜೀನಿಯಾ ವಿಶ್ವವಿದ್ಯಾಲಯದ ಕಾನೂನು ಶಾಲೆಯ ಪ್ರೊಫೆಸರ್‌ ಆಗಿದ್ದು, ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 2020, ಜನವರಿ 29ರ ತನಕ ಆದಿತ್ಯ ಅವರು ಸೇವೆಯಲ್ಲಿರಲಿದ್ದಾರೆ. ಆದಿತ್ಯ ಅವರು 2016, ಜೂನ್‌ನಲ್ಲಿ ವರ್ಜೀನಿಯಾ ವಿವಿ ಕಾನೂನು ಶಾಲೆಗೆ ನೇಮಕಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next