ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾಧ್ಯಮ ಉದ್ಯಮವಾದ ಟ್ರಂಪ್ ಮೀಡಿಯಾ & ಟೆಕ್ನಾಲಜಿ ಗ್ರೂಪ್ ನ ಷೇರು ಮೌಲ್ಯ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಪರಿಣಾಮ, ಟ್ರಂಪ್ ಅವರ ಒಟ್ಟು ಮೌಲ್ಯದಲ್ಲಿ 1 ಶತಕೋಟಿ ಯುಎಸ್ ಡಾಲರ್ ನಷ್ಟಕ್ಕೆ ಕಾರಣವಾಯಿತು ಎಂದು ಸಿಎನ್ ಎನ್ ವರದಿ ಮಾಡಿದೆ.
ಇದನ್ನೂ ಓದಿ:Small Screen: ಒಂದೇ ಕಾರ್ಯಕ್ರಮದ ಜಡ್ಜ್ ಆಗಿ ಕಿಚ್ಚ,ದರ್ಶನ್,ಯಶ್..? ಯಾವ ಶೋವಿದು?
ಡೊನಾಲ್ಡ್ ಟ್ರಂಪ್ ಮಾಧ್ಯಮ ಸಂಸ್ಥೆ 58 ಮಿಲಿಯನ್ ನಷ್ಟ ಕಂಡಿದ್ದು, 2023ರಲ್ಲಿ ಕನಿಷ್ಠ ಆದಾಯ ಹೊಂದಿತ್ತು. ಇದರ ಪರಿಣಾಮ ಟ್ರಂಪ್ ಅವರ ಆದಾಯದ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ವರದಿ ತಿಳಿಸಿದೆ.
ಟ್ರಂಪ್ ಮಾಧ್ಯಮದ ಮೌಲ್ಯ ಕಳವಳಕಾರಿಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯವ್ಯಕ್ತಪಡಿಸಿದ್ದು, 2023ರಲ್ಲಿ ಸಂಸ್ಥೆಯ ಆರ್ಥಿಕ ಸ್ಥಿತಿ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಭಾರೀ ಕುಸಿದ ಕಂಡಿರುವುದಾಗಿ ವರದಿ ವಿವರಿಸಿದೆ.
ಟ್ರಂಪ್ ಮಾಧ್ಯಮ ಸಂಸ್ಥೆಯ ಷೇರು ಮೌಲ್ಯ ಸೋಮವಾರ (ಏ.01) ಶೇ.21ರಷ್ಟು ಕುಸಿತ ಕಂಡಿತ್ತು. ಇದರಿಂದಾಗಿ ಕಂಪನಿಯಲ್ಲಿ ಟ್ರಂಪ್ ಅವರ ಪಾಲು 6.3 ಶತಕೋಟಿ ಯುಎಸ್ ಡಾಲರ್ ನಿಂದ ಸುಮಾರು 3.8 ಶತಕೋಟಿ ಯುಎಸ್ ಡಾಲರ್ ಗೆ ಇಳಿಕೆಯಾಗಿದೆ.