ಮಾಸ್ಕೋ: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನೂ ಸುರಕ್ಷಿತರಾಗಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆತಂಕ ವ್ಯಕ್ತಪ ಡಿಸಿ ದ್ದಾರೆ. ಕಜಕಿಸ್ಥಾನದ ಕಾರ್ಯ ಕ್ರಮದ ಬಳಿಕ ಮಾತನಾಡಿ, ಅಮೆರಿಕದ ಇತಿಹಾಸ ದಲ್ಲಿ ಹಲವು ಮಹತ್ವದ ಘಟನೆಗಳು ನಡೆದಿವೆ. ಟ್ರಂಪ್ ಬುದ್ಧಿವಂತ ರಾಗಿ ರುವು ದರಿಂದ ಎಚ್ಚರಿಕೆ ವಹಿಸಲಿದ್ದಾರೆ ಎಂದರು. ಜುಲೈ ಯಲ್ಲಿ ಚುನಾವಣ ಪ್ರಚಾರದ ವೇಳೆ ಟ್ರಂಪ್ ಮೇಲೆ ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡುವ ಯತ್ನ ನಡೆದಿತ್ತು. ಅದ ರಲ್ಲಿ ಅವರಿಗೆ ಗಾಯಗಳಾಗಿದ್ದವು. ಇದರ ಜತೆಗೆ ಉಕ್ರೇನ್-ರಷ್ಯಾದ ಬಿಕ್ಕಟ್ಟಿಗೆ ಟ್ರಂಪ್ ಪರಿಹಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಯಿ ತಂದು ಭಯ ಹುಟ್ಟಿಸಿದ್ದ ಪುತಿನ್:ಏಂಜೆಲಾ ಮರ್ಕೆಲ್
ರಷ್ಯಾ ಅಧ್ಯಕ್ಷ ಪುತಿನ್ ತಮ್ಮ ನಾಯಿಯೊಂದಿಗೆ ಸಭೆಗೆ ಬಂದು ಭಯಪಡಿಸಿದ್ದರೆಂದು ಜರ್ಮನಿ ಮಾಜಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಆರೋಪಿಸಿದ್ದಾರೆ. “2006ರಲ್ಲಿ ಮಾಸ್ಕೋಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ತಮಗೆ ನಾಯಿ ಕಂಡರೆ ಭಯ ಇದ್ದು ಪುತಿನ್ರ ನಾಯಿ “ಕೊನಿ’ ಯನ್ನು ತರಬಾರದೆಂದು ಕೇಳಿದ್ದೆ. ಆದರೆ ಅವರು ಆ ರೀತಿ ನಡೆದುಕೊಂಡಿಲ್ಲ’ ಎಂದಿದ್ದಾರೆ. ಈ ಬಗ್ಗೆ ಪುತಿನ್ ಪ್ರತಿಕ್ರಿಯಿಸಿ, “ಏಂಜೆಲಾರ ಭೀತಿಯ ಬಗ್ಗೆ ತಿಳಿದಿರಲಿಲ್ಲ, ಕ್ಷಮೆಯಿರಲಿ’ ಎಂದಿದ್ದಾರೆ.