Advertisement

‘Donald Trump: ಡೊನಾಲ್ಡ್ ಟ್ರಂಪ್ ನಿಧನ… ಟ್ರಂಪ್ ಮಗನ X ಖಾತೆ ಹ್ಯಾಕ್ ಮಾಡಿ ಟ್ವೀಟ್

08:30 AM Sep 21, 2023 | Team Udayavani |

ವಾಷಿಂಗ್ಟನ್ : ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ X ಖಾತೆಯನ್ನು ಬುಧವಾರ ಹ್ಯಾಕ್ ಮಾಡಲಾಗಿದ್ದು ಜೊತೆಗೆ ಅದರಿಂದ ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಲಾಗಿದೆ.

Advertisement

ಆಕ್ಷೇಪಾರ್ಹ ಟ್ವೀಟ್‌ಗಳ ಸರಣಿಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಧನಹೊಂದಿರುವುದಾಗಿ ತಪ್ಪು ಸಂದೇಶ ಸೇರಿದಂತೆ ಆಕ್ಷೇಪಾರ್ಹ ಸರಣಿ ಟ್ವೀಟ್ ಗಳನ್ನು ಮಾಡಲಾಗಿದೆ.

ಪೋಸ್ಟ್‌ಗಳ ಸರಣಿಯನ್ನು ಸೆಪ್ಟೆಂಬರ್ 20 ರಂದು ಡೊನಾಲ್ಡ್ ಟ್ರಂಪ್ ಜೂನಿಯರ್‌ ಅವರ X ಖಾತೆಯಿಂದ ಹಂಚಿಕೊಳ್ಳಲಾಗಿದೆ. ಅಲ್ಲದೆ 140k ವೀಕ್ಷಣೆಗಳನ್ನು ಪಡೆದಿದೆ.

ಟ್ವೀಟ್ ನಲ್ಲಿ ‘ನನ್ನ ತಂದೆ ಡೊನಾಲ್ಡ್ ಟ್ರಂಪ್ ನಿಧನರಾಗಿದ್ದಾರೆ ಎಂದು ಘೋಷಿಸಲು ನನಗೆ ದುಃಖವಾಗುತ್ತಿದೆ. ನಾನು 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದೇನೆ ಎಂದು ಜ್ಯೂನಿಯರ್ ಡೊನಾಲ್ಡ್ ಟ್ರಂಪ್ ಅವರ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು. ಖಾತೆ ಹ್ಯಾಕ್ ಆಗಿರುವುದು ಮನವರಿಕೆಯಾದ ಕೂಡಲೇ ಪೋಸ್ಟನ್ನು ಡಿಲೀಟ್ ಮಾಡಲಾಗಿದೆ.

ಇದನ್ನೂ ಓದಿ: Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮತ್ತಷ್ಟು ಜವಾಬ್ದಾರಿಗಳು ಹೆಚ್ಚಾಗಲಿವೆ

Advertisement

Advertisement

Udayavani is now on Telegram. Click here to join our channel and stay updated with the latest news.

Next