ವಾಷಿಂಗ್ಟನ್: ಪ್ರಚೋದನಕಾರಿ ಪೋಸ್ಟ್ ಮಾಡಿದ್ದ ಕಾರಣ ಎರಡು ವರ್ಷಗಳ ಕಾಲ ಬ್ಯಾನ್ ಆಗಿದ್ದ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯನ್ನು ಮರು ಸ್ಥಾಪಿಸಲು ಅವಕಾಶ ಕೊಡುವುದಾಗಿ ಮೆಟಾದ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್ ಹೇಳಿದ್ದಾರೆ.
ಹೊಸ ಮಾನದಂಡಗಳೊಂದಿಗೆ ಖಾತೆ ತೆರೆಯಲು ಅವಕಾಶ ನೀಡಲಾಗುವುದು. ಒಂದು ವೇಳೆ ಮತ್ತೆ ಪ್ರಚೋದನಕಾರಿಯಾಗಿ ಅಥವಾ ಸಂಸ್ಥೆಯ ನೀತಿಗೆ ವಿರುದ್ಧವಾಗಿ ಕಂಟೆಂಟ್, ಪೋಸ್ಟ್ ಗಳನ್ನು ಹಾಕಿದರೆ ಎರಡು ವರ್ಷಗಳ ಕಾಲ ಅಮಾನತುಗೊಳ್ಳುವ ಸಾಧ್ಯೆತೆಯಿದೆ ಎಂದು ನಿಕ್ ಕ್ಲೆಗ್ ಹೇಳಿದ್ದಾರೆ.
ಅಮೆರಿಕಾದ ಸಂಸತ್ ನಲ್ಲಾದ ದಂಗೆಗೆ ಪ್ರಚೋದನಕಾರಿಯಾಗಿ ಬೆಂಬಲಿಸಿದ ಕಾರಣಕ್ಕೆ ಟ್ರಂಪ್ ಅವರ ಫೇಸ್ ಬುಕ್, ಇನ್ಸ್ಟಾಗ್ರಾಮ್ ಖಾತೆಯನ್ನು ಜನವರಿ 2021 ರಂದು ಬ್ಯಾನ್ ಮಾಡಲಾಗಿತ್ತು.
ಶೀಘ್ರದಲ್ಲಿ ಖಾತೆ ಮರು ಸ್ಥಾಪನೆ ಆಗಲಿದೆ ಎಂದು ಸಂಸ್ಥೆ ಎಂದಿದೆ.
ಟ್ವಿಟರ್ ನಲ್ಲಿ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಲಾಗಿದೆ.