Advertisement
ಹೊಸದಿಲ್ಲಿ ಮತ್ತು ಅಹಮದಾಬಾದ್‌ಗಳಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮಗಳಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ. ಈ ಪ್ರವಾಸದ ವೇಳೆ ಎರಡೂ ದೇಶಗಳಿಗೆ ಬಹು ಮುಖ್ಯವಾಗಿರುವ ವ್ಯಾಪಾರ ಒಪ್ಪಂದ ಅನುಮೋದನೆಗೊಳ್ಳಲಿದೆ. ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ 2010, 2015ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದರು. ಅಹಮದಾಬಾದ್‌ನಲ್ಲಿ ಹೌಡಿ ಮೋದಿ ಮಾದರಿಯಲ್ಲಿಯೇ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ.
ಟ್ರಂಪ್ ಭಾರತ ಭೇಟಿಯ ದಿನಗಳು ಹತ್ತಿರವಾಗುತ್ತಿದ್ದಂತೆ ಎರಡೂ ದೇಶಗಳ ನಡುವಿನ ವ್ಯಾವಹಾರಿಕ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹೆಜ್ಜೆಯಿಟ್ಟಿದೆ. ಅಮೆರಿಕದ ಲಾಕ್‌ಹೀಡ್ ಮಾರ್ಟಿನ್ ಕಂಪೆನಿಯೊಂದಿಗೆ ಭಾರತ ಮಾಡಿಕೊಳ್ಳಲು ಉದ್ದೇಶಿಸಿರುವ 18,000 ಕೋ.ರೂ.ಗಳ ಮೊತ್ತದ 24 ಎಂ.ಎಚ್ ಮಾದರಿಯ ಸೇನಾ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ಕೇಂದ್ರ ಸರಕಾರ ನಿರತವಾಗಿದೆ. ಈ ಮೂಲಕ ನೆರೆ ರಾಷ್ಟ್ರ ಚೀನಕ್ಕೆ ಸೆಡ್ಡು ಹೊಡೆಯುವ ಇರಾದೆಯೂ ಭಾರತಕ್ಕಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಿಂದ ಭಾರತ ಕೊಳ್ಳುತ್ತಿರುವ ರಕ್ಷಣ ಸಾಮಗ್ರಿಗಳ ವ್ಯವಹಾರ 2007ರಿಂದ ಇಲ್ಲಿಯ ವರೆಗೆ 1 ಲಕ್ಷ ಕೋಟಿ ರೂ.ಗಳ ಗೆರೆಯನ್ನು ದಾಟಿದ್ದು, ಹೊಸ ಒಪ್ಪಂದವು ಈ ವ್ಯವಹಾರಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ನಿರೀಕ್ಷೆಯಿದೆ.