ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಮಹಾಭಿಯೋಗಕ್ಕೆ ಒಳಗಾಗಿದ್ದಾರೆ. ಅಮೆರಿಕ ಸಂಸತ್ ಟ್ರಂಪ್ ವಿರುದ್ದ ದೋಷಾರೋಪಣೆಯನ್ನು ಹೊರಿಸಿದ್ದು, ಎರಡು ಬಾರಿ ಮಹಾಭಿಯೋಗಕ್ಕೆ ಒಳಗಾದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್ ಪಾತ್ರರಾದರು.
ಟ್ರಂಪ್ ಪ್ರಚೋದನೆಯ ಕಾರಣದಿಂದ ಅವರ ಬೆಂಬಲಿಗರು ಕೆಲ ದಿನಗಳ ಹಿಂದೆ ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಐದು ಮಂದಿ ಸಾವನ್ನಪ್ಪಿದ್ದರು.
ಕ್ಯಾಪಿಟಲ್ ಹಿಲ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ವಾಗ್ಧಂಡನೆ’ಯ ಬಿಸಿ ಅನುಭವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಬುಧವಾರ ವಾಗ್ಧಂಡನೆ ಪ್ರಕ್ರಿಯೆ ಆರಂಭವಾಗಿದೆ. ಅಮೆರಿಕದ ಕಾಲಮಾನ ಬೆಳಗ್ಗೆ 9ಕ್ಕೆ ಹೌಸ್ ಸಮಾವೇಶ ಗೊಂಡು, ಮಹಾಭಿಯೋಗ ನಿರ್ಣಯ ಕುರಿತ ಚರ್ಚೆ ನಡಯಿತು.
ಇದನ್ನೂ ಓದಿ:ಬೇಗುದಿ ಸ್ಫೋಟಕ್ಕೆ ವಿಸ್ತರಣೆ ಟಿಕ್ ಟಿಕ್…. ಕುತಾಗಲಿದೆಯೇ ಆರೋಪ, ಆಕ್ರೋಶ?
ಸುಮಾರು 2 ಗಂಟೆಗಳ ಚರ್ಚೆ ಬಳಿಕ 433 ಸದಸ್ಯರು ಹಾಜರಿದ್ದ ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ ಟ್ರಂಪ್ ವಿರುದ್ಧ 232 ಮತಗಳು (ಡೆಮಾಕ್ರೆಟ್ಸ್) ಬಂದಿವೆ. ಈ ಪೈಕಿ 10 ರಿಪಬ್ಲಿಕನ್ಸ್ ಮತಗಳು ಸೇರಿವೆ. ಟ್ರಂಪ್ ಪರ 197 ಮತ ಬಿದ್ದಿವೆ. ಈ ಮೂಲಕ ಎರಡು ಬಾರಿ ವಾಗ್ದಂಡನೆ ಎದುರಿಸಿದ ಮೊದಲ ಅಮೆರಿಕ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್ ಒಳಗಾಗಿದ್ದಾರೆ.