Advertisement

ಟ್ರಂಪ್ ಗೆ 20 ಲಕ್ಷ ಡಾಲರ್ ದಂಡ ವಿಧಿಸಿದ ಕೋರ್ಟ್; ರಾಜಕೀಯಕ್ಕಾಗಿ ಟ್ರಸ್ಟ್ ಹಣ ಬಳಕೆ!

09:28 AM Nov 09, 2019 | Team Udayavani |

ವಾಷಿಂಗ್ಟನ್: 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕಾಗಿ ತಮ್ಮ ಚಾರಿಟೇಬಲ್ ಟ್ರಸ್ಟ್ ನ ಹಣಕಾಸನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ನ್ಯಾಯಾಲಯ 20 ಲಕ್ಷ ಡಾಲರ್ ದಂಡ ವಿಧಿಸಿದೆ ಎಂದು ವರದಿ ತಿಳಿಸಿದೆ.

Advertisement

ನ್ಯೂಯಾರ್ಕ್ ಅಟಾರ್ನಿ ಜನರಲ್ ಮಾಹಿತಿ ಪ್ರಕಾರ, ತಮ್ಮ ಚಾರಿಟೇಬಲ್ ಟ್ರಸ್ಟ್ ನ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ತಪ್ಪೊಪ್ಪಿಕೊಂಡಿರುವುದಾಗಿ ವಿವರಿಸಿದೆ.

ಇದಕ್ಕೂ ಮುನ್ನ ಟ್ರಂಪ್ ತಾನು ಯಾವುದೇ ಹಣಕಾಸಿನ ದುರ್ಬಳಕೆ ಮಾಡಿಕೊಂಡಿಲ್ಲ ಎಂದೇ ವಾದಿಸಿದ್ದರು. ತಮ್ಮ ಸ್ವಂತ ಲಾಭಕ್ಕಾಗಿ ಅಧ್ಯಕ್ಷ ಹುದ್ದೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿ ಹಲವಾರು ತನಿಖೆಗಳು ಟ್ರಂಪ್ ವಿರುದ್ಧ ಆರೋಪಿಸಿದ್ದವು. ಅಲ್ಲದೇ ಹೌಸ್ ಆಫ್ ರೆಪ್ರಸೆಂಟೇಟೀವ್ಸ್ ವಾಗ್ದಂಡನೆ ತನಿಖೆ ನಡೆಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next