Advertisement

ಅನಿವಾಸಿ ಭಾರತೀಯ ಕೃಷ್ಣ ಪೆರು ಅಮೆರಿಕ ರಾಯಭಾರಿ

03:05 AM Jun 30, 2017 | Karthik A |

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕ ನಿವಾಸಿ, ಆರ್ಥಿಕ ತಜ್ಞ ಕೃಷ್ಣ ಆರ್‌. ಅರಸ್‌ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪೆರು ದೇಶದ ಅಮೆರಿಕ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ. 1986ರಿಂದಲೂ ಅಮೆರಿಕದ ರಾಯಭಾರಿಯಾಗಿಯೇ ಕಾರ್ಯನಿರ್ವಹಿಸುತ್ತಿರುವ ಅರಸ್‌ ಅವರು ಸದ್ಯ ಸ್ಪೇನ್‌ನ ಮ್ಯಾಡ್ರಿಡ್‌ನ‌ಲ್ಲಿ ರಾಯಭಾರಿಯಾಗಿ ಹಾಗೂ ಡೆಪ್ಯುಟಿ ಚೀಫ್ ಆಫ್ ಮಿಷನ್‌ ಆಗಿ  ಸೇವೆ ಸಲ್ಲಿಸುತ್ತಿದ್ದಾರೆ. ಆರ್ಥಿಕ ಹಾಗೂ ನೀತಿ ಅಭಿವೃದ್ಧಿಗೊಳಿಸುವ ಕಾರ್ಯದಲ್ಲಿ ತಜ್ಞರೆನಿಸಿಕೊಂಡಿರುವ ಅರಸ್‌ ಕಳೆದ 3 ದಶಕಗಳಿಂದ‌ ಅಮೆರಿಕದಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಈಗಾಗಲೇ ಅಮೆರಿಕದ ಏಳು ಬೇರೆ ಬೇರೆ ರಾಯಭಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸಿರುವ ಅರಸ್‌, ವಾಷಿಂಗ್ಟನ್‌ನಲ್ಲಿ ಹಿರಿಯ ಆಡಳಿತಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ ಅನುಭವಿ. ಟೆಕ್ಸಾಸ್‌ ವಿವಿಯಲ್ಲಿ ಎಂಎಸ್‌, ಜಾರ್ಜ್‌ಟೌನ್‌ ವಿವಿಯಲ್ಲಿ ಬಿಎಸ್‌ ಪದವಿ ಪಡೆದುಕೊಂಡಿರುವ ಅರಸ್‌ ಅವರು ಇಂಗ್ಲಿಷ್‌, ಸ್ಪ್ಯಾನಿಷ್‌, ಹಿಂದಿ, ತೆಲುಗು ಭಾಷೆಗಳಲ್ಲಿ ಮಾತನಾಡಬಲ್ಲರು.

Advertisement

Udayavani is now on Telegram. Click here to join our channel and stay updated with the latest news.

Next