ವಾಷಿಂಗ್ಟನ್: ಅಮೆರಿಕದಲ್ಲಿ ಶಾಲೆಗಳನ್ನು ತೆರೆಯಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಶಾಲೆಗಳಿಗೆ ನೀಡಿದ ಅನುದಾದ ತಡೆಹಿಡಿಯುವುದಾಗಿ ಮತ್ತು ತೆರಿಗೆ ವಿನಾಯಿತಿ ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ಹೇಳಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಟ್ರಂಪ್ ಹೇಳಿಕೆಯನ್ನು ದೇಶದ ಖ್ಯಾತ ವೈದ್ಯರು, ಶಿಕ್ಷಣ ತಜ್ಞರು ಮತ್ತು ಪರಿಣತರ ವರ್ಗ ಖಂಡಿಸಿದೆ.
ಸಾಕ್ಷ್ಯಗಳನ್ನು ಆಧರಿಸಿ ಪರಿಣತರ ಸಲಹೆಗಳನ್ನು ಆಧರಿಸಿ ಇಂತಹ ವಿಚಾರಗಳಿಗೆ ತೀರ್ಮಾನ ತೆಗೆದುಕೊಳ್ಳಬೇಕು ಹೊರತು ರಾಜಕೀಯ ಚಿಂತನೆಗಳಡಿ ಅಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಯಾವಾಗ ಶಾಲೆಗಳನ್ನು ತೆರೆಯಬೇಕು ಎಂಬುದರ ಬಗ್ಗೆ ನಾವು ಆರೋಗ್ಯ ವಲಯದ ಪರಿಣತರ ಸಲಹೆಗಳನ್ನು ಕೇಳಿಯೇ ತೀರ್ಮಾನಿಸಬೇಕು. ಇದರೊಂದಿಗೆ ಶಿಕ್ಷಣ ತಜ್ಞರು, ಶಾಲೆಗಳ ಆಡಳಿತದವರನ್ನೂ ಕೇಳಿಕೊಳ್ಳಬೇಕು. ಈ ವಿಚಾರದಲ್ಲಿ ಅವರ ನಿರ್ಧಾರಗಳನ್ನೇ ನಾವು ಮಾನ್ಯ ಮಾಡಬೇಕಾಗುತ್ತದೆ ಎಂದು ವಿವಿಧ ಶಿಕ್ಷಣ ಸಂಸ್ಥೆಯವರು ಅಭಿಪ್ರಾಯಟ್ಟಿದ್ದಾರೆ.
ಟ್ರಂಪ್ ಹೇಳಿಕೆ ಹಿಂದೆ ಏನಿದೆ?
ಅಮೆರಿಕ ಚುನಾವಣೆ ಕಾರಣ ಟ್ರಂಪ್ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ಆರೋಪ. ಟ್ರಂಪ್ ಹೇಳುವಂತೆ ಶಾಲೆಗಳನ್ನು ಮುಚ್ಚಿಯೇ ಇರಬೇಕೆಂದು ಹೇಳುತ್ತ ವಿರೋಧ ಪಕ್ಷವಾದ ಡೆಮೋಕ್ರಾಟ್ಸ್‌ಗಳು ರಾಜಕೀಯ ಮಾಡುತ್ತಿದ್ದಾರೆ, ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದಾರೆ ಎನ್ನುವುದು ಟ್ರಂಪ್ ಆರೋಪವಾಗಿದೆ.