Advertisement

ಗ್ರೀನ್‌ ಕಾರ್ಡ್‌ ವಿತರಣೆ ಸ್ಥಗಿತ ನಿರ್ಧಾರವನ್ನು ಸಮರ್ಥಿಸಿಕೊಂಡ ಟ್ರಂಪ್‌

04:41 PM Jun 24, 2020 | sudhir |

ವಾಷಿಂಗ್ಟನ್‌: ಕೋವಿಡ್‌-19 ಸೋಂಕು ಹರಡುವಿಕೆ ನಿಯಂತ್ರಣ ನೆಪ ಇಟ್ಟುಕೊಂಡು ಒಂದಲ್ಲ ಒಂದು ನಿಯಾಮವಾಳಿಗಳನ್ನು ಜಾರಿ ಮಾಡುತ್ತಿರುವ ಟ್ರಂಪ್‌ ಇದೀಗ ಗ್ರೀನ್‌ ಕಾರ್ಡ್‌ ವಿತರಣೆ ಸ್ಥಗಿತ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ಏಪ್ರಿಲ್‌ನಲ್ಲಿ ಗ್ರೀನ್‌​ಕಾರ್ಡ್‌ಗಳ ವಿತರಣೆಯನ್ನು ಕೇವಲ 90 ದಿನಗಳವರೆಗೆ​ ಸ್ಥಗಿತಗೊಳಿಸಿದ್ದ ಟ್ರಂಪ್‌ ಮುಂಬರುವ ಡಿಸೆಂಬರ್‌31, 2020ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದು, ಯುಸ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಉದ್ಯೋಗಿಗಳ ಕನಸಿಗೆ ತಣ್ಣೀರು ಎರೆಚಿದ್ದಾರೆ.

ಮಂಗಳವಾರ ಅರಿಜೋನಾದ ಸ್ಯಾನ್‌ ಲೂಯಿಸ್‌ನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಟ್ರಂಪ್‌ ದೇಶಿಯ ವಾಸಿಗಳಿಗೆ ಉದ್ಯೋಗ ನೀಡುವ ಅವಶ್ಯಕತೆಯಿದೆ ಎನ್ನುವ ಮೂಲಕ ಗ್ರೀನ್‌ ಕಾರ್ಡ್‌ ವಿತರಣೆಯನ್ನು ಈ ವರ್ಷಾಂತ್ಯದವರೆಗೆ ಸ್ಥಗಿತಗೊಳಿಸಿರುವ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.

ನಾವು ಇದೀಗ ಅಮೆರಿಕನ್ನರಿಗೆ ಉದ್ಯೋಗ ನೀಡಲು ಬಯಸುತ್ತೇವೆ. ಇದೀಗ ಇಲ್ಲಿನ ಉದ್ಯೋಗಗಳು ಅಮೆರಿಕ ನಾಗರಿಕರಿಗೆ ಹೋಗಬೇಕೆಂದು ನಾವು ಬಯಸುತ್ತೇವೆ. ಕೋವಿಡ್‌ -19 ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಅಮೆರಿಕನ್ನರಿಗೆ ನೆರವಾಗಲು ಈ ಹೆಜ್ಜೆ ಅತ್ಯಂತ ಅಗತ್ಯವಾಗಿದೆ ಎಂದು ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next