Advertisement

ಬೇಗ ಬಂದು ಬಿಡಿ ಅಮೆರಿಕಕ್ಕೆ ಎಂದರು ಟ್ರಂಪ್‌

06:01 PM Apr 03, 2020 | sudhir |

ನ್ಯೂಯಾರ್ಕ್‌ : ಅಮೆರಿಕದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಕೋವಿಡ್ 19  ಸೋಂಕಿತರು ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ವೇಳೆ ಸುಮಾರು 5 ಸಾವಿರ ಮಂದಿ ಸಾವನ್ನಪ್ಪಿದ್ದು , ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಎಲ್ಲ ರಾಷ್ಟ್ರಗಳಲ್ಲಿರುವ ತನ್ನ ದೇಶದ ಪ್ರಜೆಗಳನ್ನು ವಾಪಸು ಕರೆಸಿಕೊಳ್ಳಲು ಚಿಂತನೆ ನಡೆಸಿದೆ.

Advertisement

ಅಮೆರಿಕವು ಭಾರತ ಸಹಿತ ವಿಶ್ವದ ಸುಮಾರು 60 ರಾಷ್ಟ್ರಗಳಿಂದ ತನ್ನ ಪ್ರಜೆಗಳನ್ನು ತನ್ನ ದೇಶಕ್ಕೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದು, ಈ ಹಿನ್ನೆಲೆ ಭಾರತ ಸರಕಾರದ ಸಹಾಯ ಹಸ್ತವನ್ನು ಕೋರಿದೆ. ಭಾರತದಲ್ಲಿ ಸುಮಾರು 170 ಅಮೆರಿಕನ್‌ ಪ್ರಜೆಗಳಿದ್ದು, ಈ ವಾರದ ಕೊನೆಯಲ್ಲಿ ದಿಲ್ಲಿ ಹಾಗೂ ಮುಂಬಯಿಗೆ ವಿಮಾನವನ್ನು ಕಳಿಸಲಿದ್ದೇವೆ ಎಂದು ಅಮೆರಿಕದ ಅಧಿಕೃತ ಮೂಲಗಳು ತಿಳಿಸಿದ್ದು, ಸುಮಾರು 30 ಸಾವಿರ ಅಮೆರಿಕ ಪ್ರಜೆಗಳನ್ನು ಕರೆಸಿಕೊಳ್ಳಲು 350 ವಿಮಾನಗಳ ಬಳಸುತ್ತಿದೆ. ಆದರೆ ವಿಶೇಷ ಎಂದರೆ ಭಾರತಕ್ಕಿಂತಲೂ ಈಗ ಅಮೆರಿಕದ ಸ್ಥಿತಿ ಹದಗೆಟ್ಟಿದೆ.

ಆಫ್ರಿಕಾದ ಕುರಿತು ಗೊಂದಲ
ಆಫ್ರಿಕಾದಲ್ಲಿ ವಾಯು ಮಾರ್ಗವನ್ನು ರದ್ದುಗೊಳಿಸಿರುವುದರಿಂದ ಆಫ್ರಿಕಾದಲ್ಲಿನ ಅಮೆರಿಕನ್ನರನ್ನು ಕರೆಸಿಕೊಳ್ಳಲು ಸ್ವಲ್ಪ ಸಮಸ್ಯೆಯಾಗಬಹುದು ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಇದನ್ನು ಹೊರತು ಪಡಿಸಿದಂತೆ ಬೇರೆಲ್ಲ ರಾಷ್ಟ್ರಗಳಲ್ಲಿ ಸದ್ಯಕ್ಕೆ ಸಮಸ್ಯೆ ಇಲ್ಲವೆನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next