ವಾಷಿಂಗ್ಟನ್: ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸಲು 6 ದಿನಗಳಿರುವಂತೆಯೇ ಡೊನಾಲ್ಡ್‌ಟ್ರಂಪ್ ವಿರುದ್ಧ ಅಮೆರಿಕ ಸಂಸತ್‌ನ ಕೆಳಮನೆ, ಹೌಸ್‌ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಮಹಾಭಿ ಯೋಗ ಪ್ರಕ್ರಿಯೆಗೆ ಅನುಮೋದನೆ ನೀಡಿದೆ. ಈ ಬಗ್ಗೆ ಪರ 232, ವಿರುದ್ಧ 197 ಮತಗಳು ಪ್ರಾಪ್ತವಾಗಿವೆ.
ಈ ಪ್ರಕ್ರಿಯೆಯ ಪ್ರಧಾನ ಅಂಶವೆಂದರೆ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಹತ್ತು ಸಂಸದರು ಬೆಂಬಲ ಸೂಚಿಸಿ ಮತ ಹಾಕಿರುವುದು. ನಾಲ್ವರು ಮತ ಚಲಾಯಿಸಿಲ್ಲ. ಭಾರತೀಯ ಮೂಲದ ಸಂಸದ ರಾಗಿರುವ ಆ್ಯಮಿ ಬೇರಾ, ರೋ ಖನ್ನಾ, ರಾಜಾ ಕೃಷ್ಣಮೂರ್ತಿ ಮತ್ತು ಪ್ರಮೀಳಾ ಜಯ ಪಾಲ್
ಮಹಾಭಿಯೋಗದ ಪರ ಮತ ಚಲಾಯಿಸಿದ್ದಾರೆ. ಈ ಬೆಳವಣಿಗೆಯಿಂದಾಗಿ ಅಮೆರಿಕದ ಇತಿಹಾಸ ದಲ್ಲಿಯೇ ಎರಡು ಬಾರಿ ಮಹಾಭಿಯೋಗಕ್ಕೆ ಗುರಿಯಾದ ಮೊದಲ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಬ ಅಪಖ್ಯಾತಿಗೆ ಪಾತ್ರರಾಗಿದ್ದಾರೆ.
ಉಪಾಧ್ಯಕ್ಷ ಮೈಕ್ ಪೆನ್ಸ್ ಮಂಗಳವಾರ ಚರ್ಚೆ ವೇಳೆ ಸಂವಿಧಾನದ 25ನೇ ತಿದ್ದುಪಡಿಯನ್ವಯ ಟ್ರಂಪ್ ವಜಾಕ್ಕೆ ಒಪ್ಪಿರಲಿಲ್ಲ. ಆ ಬಳಿಕ ಮಹಾಭಿಯೋಗ ಪ್ರಕ್ರಿಯೆಗೆ ಒಳಪಡಿಸಬೇಕು ಎಂದು ನಿರ್ಣಯ ಅಂಗೀಕರಿಸಿತು.ಇನ್ನು ಸೆನೆಟ್‌ಗೆಅಮೆರಿಕ ಸಂಸತ್ ಕೆಳಮನೆ, ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಮಹಾಭಿಯೋಗ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿದೆ. ಅದು ಪೂರ್ಣ ಪ್ರಮಾಣದಲ್ಲಿ ಅಂಗೀಕಾರಗೊಳ್ಳಬೇಕಿದ್ದರೆ ಮೇಲ್ಮನೆ, ಸೆನೆಟ್‌ನಲ್ಲಿ ಮಂಡನೆಯಾಗಿ ಒಪ್ಪಿಗೆ ಸಿಗಬೇಕು. ಸದ್ಯ ಸೆನೆಟ್ ಕಲಾಪವನ್ನು ಜ. 19ರ ವರೆಗೆ ಮುಂದೂಡಲಾಗಿದೆ. ಜ. 20ರಂದು ಬೈಡೆನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಟ್ರಂಪ್ ದೋಷಿ ಎಂದು ಸೆನೆಟ್ ಅಭಿಪ್ರಾಯಪಟ್ಟಲ್ಲಿ 2024ರಲ್ಲಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮತದಾನಕ್ಕೆ ನಿರ್ಧಾರ ಕೈಗೊಳ್ಳಬಹುದು.