Advertisement

“ಡಾನ್‌ ತಸ್ಲಿಂ’ಆರ್‌ಎಸ್‌ಎಸ್‌ ನೇತಾರರ ಹತ್ಯೆಗೈಯ್ಯಲು ಸ್ಕೆಚ್‌ ಹಾಕಿದ್ದ ಪ್ರಕರಣದ ಆರೋಪಿ

10:07 AM Feb 04, 2020 | sudhir |

ಕಾಸರಗೋಡು : ಬಂಟ್ವಾಳ ಸಜಪ ಮೂಡ ಗ್ರಾಮದ ಬೊಳ್ಳಾಯಿ ನಗ್ರಿಯಲ್ಲಿ ಕಾರಿನೊಳಗೆ ಕೊಲೆಯಾಗಿದ್ದ ಕಾಸರಗೋಡು ಚೆಂಬರಿಕ ನಿವಾಸಿ ಡಾನ್‌ ತಸ್ಲಿಂ ಎಂದೇ ಕರೆಸಿಕೊಂಡಿದ್ದ ಸಿ.ಎಂ.ಮುಹತ್ತಾಸಿಮ್‌(40) ಆರ್‌.ಎಸ್‌.ಎಸ್‌. ನೇತಾರರ ಹತ್ಯೆಗೆ ಸ್ಕೆಚ್‌ ಹಾಕಿದ್ದ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

Advertisement

ಆರ್‌ಎಸ್‌ಎಸ್‌ ನೇತಾರರ ಹತ್ಯೆಗೆ ಸ್ಕೆಚ್‌ ಹಾಕಿಕೊಂಡಿದ್ದ ಈತನನ್ನು 2019 ಜನವರಿ 11 ರಂದು ವಿದ್ಯಾನಗರ ಪೊಲೀಸರ ಸಹಾಯದಿಂದ ಚಟ್ಟಂಚಾಲ್‌ನಿಂದ ದಿಲ್ಲಿ ಪೊಲೀಸರು ಬಂಧಿಸಿದ್ದರು. ಬಿಜೆಪಿ ಅಲ್ಪಸಂಖ್ಯಾತ ಸೆಲ್‌ನ ಕಾರ್ಯಕರ್ತನಾಗಿದ್ದೇನೆಂಬ ಪ್ರಚಾರವನ್ನೂ ಈತ ಈ ಹಿಂದೆ ನಡೆಸಿದ್ದನು.

ತಸ್ಲಿಂ ವಿರುದ್ಧ ಕಾಸರಗೋಡು ಮತ್ತು ಬೇಕಲ ಪೊಲೀಸ್‌ ಠಾಣೆಗಳಲ್ಲಿ ನಕಲಿ ಪಾಸ್‌ಪೋರ್ಟ್‌, ಅಕ್ರಮ ಬಂದೂಕು ಕೈವಶವಿರಿಸಿಕೊಂಡ ಮೊದಲಾದ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕರ್ನಾಟಕ ಪೊಲೀಸರು ತನಿಖೆಯನ್ನು ಕಾಸರಗೋಡಿಗೂ ವಿಸ್ತರಿಸಿದ್ದಾರೆ.
ಚೆಂಬರಿಕದ ತಸ್ಲಿಂ ತಾನು ಭಾರತೀಯ ಬೇಹುಗಾರಿಕಾ ಸಂಸ್ಥೆಯಾದ “ರಾ’ದ ಅಧಿಕಾರಿಯಾಗಿದ್ದೇನೆಂದು ಸ್ವಯಂ ಘೋಷಿಸಿಕೊಂಡು ದುಬೈಯಲ್ಲಿ ಅಕ್ರಮ ವ್ಯವಹಾರ ನಡೆಸುತ್ತಿದ್ದ. ಕಾಸರಗೋಡಿನ ಹಲವರ ಬಗ್ಗೆ ಮಾಹಿತಿ ನೀಡುವ ಇನ್‌ಫಾರ್ಮರ್‌ ಆಗಿ ದುಬೈಯಲ್ಲಿ ಪೊಲೀಸರಿಗೆ ರಹಸ್ಯ ಮಾಹಿತಿಗಳನ್ನು ನೀಡುತ್ತಿದ್ದನು. ಈ ಮಾಹಿತಿಯಂತೆ ದುಬೈ ಪೊಲೀಸರು ಕಾಸರಗೋಡಿನ ಹಲವರನ್ನು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next