Advertisement

ಎಟಿಪಿ ಫೈನಲ್ಸ್‌: ರಫೆಲ್‌ ನಡಾಲ್‌ಗೆ ಸೋಲುಣಿಸಿದ ಡೊಮಿನಿಕ್‌ ಥೀಮ್‌

09:12 AM Nov 19, 2020 | keerthan |

ಲಂಡನ್‌: ಇಲ್ಲಿ ನಡೆಯುತ್ತಿರುವ ಎಟಿಪಿ ಫೈನಲ್ಸ್‌ ಗ್ರೂಪ್‌ ಹಂತದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರಿಯಾದ ಡೊಮಿನಿಕ್‌ ಥೀಮ್‌, ವಿಶ್ವದ ಬಲಿಷ್ಠ ಟೆನಿಸಿಗ ರಫೆಲ್‌ ನಡಾಲ್‌ಗೆ 7-6 (9-7), 7-6 (7-4) ಅಂತರದಿಂದ ಸೋಲುಣಿಸಿ ಮೇಲುಗೈ ಸಾಧಿಸಿದ್ದಾರೆ.

Advertisement

ನಡಾಲ್‌ ಮತ್ತು ಥೀಮ್‌ ಮಧ್ಯೆ ಜಿದ್ದಾಜಿದ್ದಿ ಕಾಳಗ ನಡೆಯಿತು. ಯುಎಸ್‌ ಓಪನ್‌ ಚಾಂಪಿಯನ್‌ ಥೀಮ್‌ ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸುತ್ತ ಬಂದರು. ನಡಾಲ್‌ ಕೂಡ ಸಡ್ಡು ಹೊಡೆದರು.

ಎರಡೂ ಸೆಟ್‌ ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಇಲ್ಲಿ ಡೊಮಿನಿಕ್‌ ಥೀಮ್‌ ಅದೃಷ್ಟ ಒಲಿಸಿಕೊಂಡರು. ಈ ಗೆಲುವಿನೊಂದಿಗೆ ಥೀಮ್‌ ಸೆಮಿಫೈನಲಿಗೇರುವ ಅವಕಾಶ ಉಜ್ವಲವಾಗಿದೆ.

ಇದನ್ನೂ ಓದಿ:2021:ಭಾರತೀಯ ಕ್ರಿಕೆಟಿಗೆ ಬಿಡುವಿಲ್ಲದ ವರ್ಷ: ಏಶ್ಯಕಪ್‌, ಟಿ20 ವಿಶ್ವಕಪ್ ಜತೆಗೆ 43 ಪಂದ್ಯ

ಇದು ಥೀಮ್‌ ಸಾಧಿಸಿದ ಸತತ 2ನೇ ಗೆಲುವು. ಮೊದಲ ಪಂದ್ಯದಲ್ಲಿ ಅವರು ಸ್ಟೆಫ‌ನಸ್‌ ಸಿಸಿಪಸ್‌ಗೆ ಆಘಾತವಿಕ್ಕಿದ್ದರು. ಗುರುವಾರದ ಪಂದ್ಯದಲ್ಲಿ ಥೀಮ್‌-ರುಬ್ಲೇವ್‌ ಮುಖಾಮುಖಿ ಆಗಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next