Advertisement

ಕೊಳಕು ಪ್ರವಾಸಿಗರಿಂದ ಗೋವಾ ಹರಿಯಾಣ ಆಗುತ್ತಿದೆ: ಸಚಿವ

03:44 PM Feb 10, 2018 | udayavani editorial |

ಪಣಜಿ : “ಉತ್ತರ ಭಾರತದ ಪ್ರವಾಸಿಗರು ಗೋವೆಯನ್ನು ಕೊಳಕು ಮಾಡುತ್ತಿದ್ದಾರೆ. ಅವರಿಗೆ ಗೋವೆಯ ಶುಚಿತ್ವ, ನೈರ್ಮಲ್ಯದ ಬಗ್ಗೆ ಕಾಳಜಿಯೇ ಇಲ್ಲ; ಅವರು ಗೋವೆಯನ್ನು ಹರಿಯಾಣ ಮಾಡಲು ಹೊರಟಿದ್ದಾರೆ’ ಎಂದು ಗೋವೆಯ ಪಟ್ಟಣ ಮತ್ತು ಗ್ರಾಮೀಣ ಯೋಜನಾ ಸಚಿವ ವಿಜಯ್‌ ಸರ್‌ದೇಸಾಯ್‌ ಹೇಳಿದ್ದಾರೆ ಮತ್ತು ಆ ಮೂಲಕ  ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

Advertisement

ಗೋವೆಯನ್ನು ಸಂದರ್ಶಿಸುವ ಹೆಚ್ಚಿನ ದೇಶೀಯ ಪ್ರವಾಸಿಗರು ಈ ಭೂಮಿಯ ಮೇಲಿನ ಕೊಳಕು ಪದರದವರಾಗಿದ್ದಾರೆ.  ಇವತ್ತು ನಾವು ನಮ್ಮ ರಾಜ್ಯದ ಜನಸಂಖ್ಯೆಯ ಆರು ಪಟ್ಟು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು  ಪಡೆಯುತ್ತಿದ್ದೇವೆ. ಇವರು ಮೇಲ್‌ ಸ್ತರದ ಪ್ರವಾಸಿಗರಲ್ಲ; ಅವರು ಈ ಭೂಮಿಯ ಮೇಲೆ ಕೊಳೆ ಪದರದವರಾಗಿದ್ದಾರೆ ಎಂದು ಸರ್‌ದೇಸಾಯಿ ಮೂದಲಿಕೆಯ ಮಾತನ್ನು ಆಡಿದ್ದಾರೆ. 

ಗೋವಾ ದೇಶದ ಇತರ ರಾಜ್ಯಗಳಿಗಿಂತ ಮೇಲ್ಮಟ್ಟದ ರಾಜ್ಯವಾಗಿದೆ; ಇತರ ರಾಜ್ಯಗಳಿಂದ ಬರುವ ಬೇಜವಾಬ್ದಾರಿಯ ಪ್ರವಾಸಿಗರನ್ನು ನಾವು ನಿಯಂತ್ರಿಸಲಾರೆವು. ಅವರಿಗೆ ಜವಾಬ್ದಾರಿ ಇದೆಯೇ ? ಪ್ರಜ್ಞೆ ಇದೆಯೇ ? ಇಲ್ಲ. ದೇಶದ ಇತರ ರಾಜ್ಯಗಳನ್ನು ಹೋಲಿಸಿದರೆ ಗೋವೆಯ ತಲಾ ಆದಾಯ ಎಷ್ಟೋ ಹೆಚ್ಚಿದೆ; ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಅವರಲ್ಲಿ ಅತ್ಯುನ್ನತವಾಗಿದೆ. ಆರೋಗ್ಯ ಅಥವಾ ಇನ್ನಿತರ ಯಾವುದೇ ಮಾನದಂಡಗಳಿಂದ ಪರೀಕ್ಷಿಸಿದರೂ ಗೋವಾ, ದೇಶದ ಇತರ ರಾಜ್ಯಗಳಿಗಿಂದ ಉತ್ತಮವಿದೆ ಎಂದು ಸರ್‌ದೇಸಾಯ್‌ ನುಡಿದರು. 

ಸಚಿವ ಸರ್‌ದೇಸಾಯ್‌ ಅವರು ತಮ್ಮ ಈ ಅಭಿಪ್ರಾಯಗಳನ್ನು ಪಣಜಿ ಸಮೀಪದ ರಿಸಾರ್ಟ್‌ ಒಂದರಲ್ಲಿ ಏರ್ಪಡಿಸಲಾಗಿದ್ದ ಗೋವಾ ಬಿಝ್ ಫೆಸ್ಟ್‌ ನಲ್ಲಿ  ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next