ದೇವನಹಳ್ಳಿ: ದೇಶೀಯ ವಿಮಾನಗಳ ಹಾರಾಟ ಹಿನ್ನೆಲೆಯಲ್ಲಿ ಮಂಗಳವಾರ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿ ದೆ. ಸೋಮವಾರವೇ ಕೇಂದ್ರ ಸರ್ಕಾರ ದೇಶೀಯ ವಿಮಾನಗಳ ಹಾರಾಟ ಆರಂಭಕ್ಕೆ ಸೂಚಿಸಿತ್ತು. ವಿವಿಧ ರಾಜ್ಯಗಳಿಂದ ಬರುವ ಪ್ರಯಾಣಿಕರಲ್ಲಿ ಕ್ವಾರಂಟೈನ್ ಮಾಡುವ ಭಯದಿಂದ ಬೇರೆ ಬೇರೆ ರಾಜ್ಯಗಳಿಂದ ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಹೀಗಾಗಿ ಹಲವು ವಿಮಾನಗಳ ಬಂದ್ ಆಗುವ ಸಾಧ್ಯತೆಗಳಿವೆ. ಚೆನ್ನೈ, ದೆಹಲಿಯಿಂದ ಆಗಮಿಸುವ ಪ್ರಯಾಣಿಕರನ್ನು ಬಿಎಂಟಿಸಿ ಬಸ್‌ಗಳಲ್ಲಿ ಕ್ವಾರಂಟೈನ್‌ಗೆ ಅಧಿಕಾರಿಗಳು ಕಳುಹಿಸುತ್ತಿ ದ್ದಾರೆ. ಸ್ಥಳದಲ್ಲೇ 15 ಆ್ಯಂಬುಲೆನ್ಸ್ ಮೊಕ್ಕಾಂ ಹೂಡಿವೆ. ಹಿಂದೂರ್‌ನಿಂದ ದೆಹಲಿಗೆ ಆಗಮಿಸಿ, ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 5 ಜನ ಬಡ ಕುಟುಂಬದವರು ಕ್ವಾರಂಟೈನ್‌ಗೆ ಹಣ ಭರಿಸಲು ಸಾಧ್ಯವಿಲ್ಲ.
ಸೋಮವಾರ ದಿಂದ ವಿಮಾನ ನಿಲ್ದಾಣದ ಒಳಗಡೆ ಪರದಾಡುತ್ತಿದ್ದಾರೆ. ದೆಹಲಿಯಿಂದ ಬಂದ ಪತ್ನಿಯನ್ನು ಹೊರಗೆ ಬಿಡುತ್ತಿಲ್ಲ. ನಮಗೆ ಸರ್ಕಾರ ಸಹಾಯ ಮಾಡಿಲ್ಲ. ಕ್ವಾರಂಟೈನ್‌ಗೆ ಹಣವನ್ನು ಸರ್ಕಾರ ಭರಿಸಲಿ ಎಂದು ಪತಿ ಏರ್‌ಪೋಟ್‌ನಲ್ಲಿ ಅಳಲು ತೋಡಿಕೊಂಡರು.
2 ಪ್ರತ್ಯೇಕ ಕೌಂಟರ್: ದೇಶಿಯ ಪ್ರಯಾಣಿಕರು ಮತ್ತು ಅಂತಾರಾಷ್ಟ್ರೀಯ ಪ್ರಯಾಣಿಕರಿ ಗಾಗಿ 2 ಪ್ರತ್ಯೇತಕ ಕೌಂಟರ್ ತೆರೆಯಲಾಗಿದೆ. ಬಂದವರನ್ನು ಹೋಟೆಲ್ ಕ್ವಾರಂ ಟೈನ್‌ಗೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ಒಂದಿಷ್ಟು ಜನ ಬಸ್ ಹತ್ತಲು ಆಗಮಿಸಿ ಪರಾರಿಯಾಗಲು ಯತ್ನಿಸಿ ದ್ದರು ಎನ್ನಲಾಗಿದ್ದು ಭದ್ರತೆ ಕಲ್ಪಿಸಲಾಗಿದೆ.
750 ಪ್ರಯಾಣಿಕರು ಆಗಮನ: 2 ಅಂತಾರಾಷ್ಟ್ರೀಯ ವಿಮಾನಗಳು ಈಗಾಗಲೇ ಬಂದಿವೆ. ಬಂದ ಎಲ್ಲಾ ಪ್ರಯಾಣಿಕರನ್ನು ಸಾಂಸ್ಥಿಕವಾಗಿ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 177ಜನ ಬಂದಿಳಿ ದಿದ್ದಾರೆ. 18 ಡೊಮೆಸ್ಟಿಕ್ ವಿಮಾನ, 10 ವಿಮಾನ ರೆಡ್ ಝೋನ್ ರಾಜ್ಯಗಳಿಂದ ಬಂದಿವೆ. ಇದರಿಂದ ಸುಮಾರು 750 ಪ್ರಯಾಣಿಕರು ಆಗಮಿಸಿದ್ದಾರೆ. ಸರ್ಕಾರದ ಆದೇಶದಂತೆ ಮುಂದಿನ ಪ್ರಕ್ರಿಯೆ ನಡೆ ಯುತ್ತಿದೆ ಎಂದು ಡಿಸಿಪಿ ಭೀಮಶಂಕರ್ ಗುಳೇದ್ ತಿಳಿಸಿದರು.
6 ತಿಂಗಳ ನಂತರ ಮಗನ ದರ್ಶನ: ಕಳೆದ 6 ತಿಂಗಳಿನಿಂದ ಮೆಡಿಕಲ್ ವ್ಯಾಸಂಗಕ್ಕೆ ಫಿಲಿಫೈನ್ಸ್‌ಗೆ ಹೋಗಿದ್ದ ಮಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ, ಮಗನನ್ನು ಕಂಡ ತಾಯಿ ಆನಂದ ಭಾಷ್ಪ ಸುರಿಸಿದರು. ಲಾಕ್‌ಡೌನ್ ಜಾರಿಗೆ ಬಂದ ದಿನದಿಂದಲೂ ಮಗನನ್ನು ಕರೆಸಿಕೊಳ್ಳಲು ತಂದೆ-ಚಿಕ್ಕಪ್ಪ ತಿರುಪತಿಗೆ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮಗನನ್ನು ಕಂಡು ಪೋಷಕರು ಕಣ್ಣೀರು ಹಾಕಿದರು. ಇನ್ನು ಮಗನನ್ನು ನೋಡಿದರೂ ಮಾತನಾಡಲು ಆಗುತ್ತಿಲ್ಲ ಎಂದು ಹೆತ್ತ ತಾಯಿ ಅಳಲು ತೋಡಿಕೊಂಡರು.