Advertisement

ಐಎಎಫ್ ಗೆ ಸಿದ್ಧವಾಗಿದೆ ಸ್ವದೇಶಿ ಅಸ್ತ್ರ

09:55 AM Oct 01, 2019 | Team Udayavani |

ಹೊಸದಿಲ್ಲಿ: ಹದಿನೈದು ವರ್ಷಗಳಿಂದ ಅಭಿವೃದ್ಧಿಗೊಳಿಸುತ್ತಿದ್ದ ಅತ್ಯಾಧುನಿಕ ಅಸ್ತ್ರ ಕ್ಷಿಪಣಿ ಸಿದ್ಧವಾಗಿದೆ. ಐಎಎಎಫ್ 200 ಕ್ಷಿಪಣಿ ಖರೀದಿ ಮಾಡಲಿದೆ ಎಂಬ ನಿರೀಕ್ಷೆ ಇದೆ ಎಂದು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನ ಕೇಂದ್ರ (ಡಿಆರ್‌ಡಿಒ) ಮುಖ್ಯಸ್ಥ ಡಾ| ಜಿ. ಸತೀಶ್‌ ರೆಡ್ಡಿ ತಿಳಿಸಿದ್ದಾರೆ. ಅವುಗಳನ್ನು ಸುಖೋಯ್‌ 30 ಎಂಕೆಐ ಯುದ್ಧ ವಿಮಾನಕ್ಕೆ ಅಳವಡಿಸಬಹುದಾಗಿದೆ.

Advertisement

ಈ ಕ್ಷಿಪಣಿಯು 110 ಕಿ.ಮೀ. ದೂರ ಸಾಗಬಹುದಾಗಿದ್ದು, ಇಂಥ ಸುಧಾರಿತ ಕ್ಷಿಪಣಿಯನ್ನು ಹೊಂದಿರುವ ಕೆಲವೇ ದೇಶಗಳ ಪೈಕಿ ಭಾರತ ಕೂಡ ಒಂದಾಗಿದೆ. ಈವರೆಗೆ ಅಮೆರಿಕ, ರಷ್ಯಾ, ಫ್ರಾನ್ಸ್‌ ಮತ್ತು ಇಸ್ರೇಲ್‌ ಇದೇ ಮಾದರಿಯ ಅತ್ಯಾಧುನಿಕ ಕ್ಷಿಪಣಿಗಳನ್ನು ಅಭಿವೃದ್ಧಿಗೊಳಿಸುವ ಸಾಮರ್ಥ್ಯ ಹೊಂದಿದ್ದವು.

ಪ್ರತಿರೋಧವನ್ನು ತಡೆಯುವ ಸಾಮರ್ಥ್ಯವನ್ನೂ ಹೊಂದಿರುವ ಸೂಪರ್‌ಸಾನಿಕ್‌ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಅಸ್ತ್ರಕ್ಕಿದೆ. ಕೇವಲ 3.57 ಮೀಟರ್‌ ಉದ್ದದ ಈ ಅಸ್ತ್ರ 154 ಕಿಲೋ ತೂಕ ಹೊಂದಿದೆ. ಗಂಟೆಗೆ 5 ಸಾವಿರ ಕಿ.ಮೀ ವೇಗದಲ್ಲಿ ಇದು ಸಾಗಬಲ್ಲದು. ಈ ಒಂದು ಅಸ್ತ್ರಕ್ಕೆ 7-8 ಕೋಟಿ ರೂ. ವೆಚ್ಚವಾಗುತ್ತದೆ. ವಿದೇಶದಲ್ಲಿ ತಯಾರಾಗುವ ಇದೇ ಶ್ರೇಣಿಯ ಕ್ಷಿಪಣಿಗಳಿಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ವೆಚ್ಚದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next