Advertisement

ಡೊಂಬಿವಲಿ ಪಶ್ಚಿಮ ಶ್ರೀ ಜಗದಂಬಾ ಮಂದಿರ: ರಂಗಪೂಜೆ

05:36 PM Oct 27, 2020 | Suhan S |

ಮುಂಬಯಿ, ಅ. 26: ಡೊಂಬಿವಲಿ ಪಶ್ಚಿಮದ ಗೋಪಿನಾಥ ಚೌಕ್‌ ಸಮೀಪದ ಯಕ್ಷಕಲಾ ಸಂಸ್ಥೆ ಡೊಂಬಿವಲಿ ಸಂಚಾಲಿತ ಶ್ರೀ ಜಗದಂಬಾ ಮಂದಿರದಲ್ಲಿ 6ನೇ ವಾರ್ಷಿಕ ಶರನ್ನವ ರಾತ್ರಿ ಉತ್ಸವದ ಅಂಗವಾಗಿ ಅ. 23ರಂದು ರಂಗಪೂಜೆಯನ್ನು ಆಯೋಜಿಸಲಾಗಿತ್ತು. ಮಂದಿರದ ಪ್ರಧಾನ ಅರ್ಚಕ ವೇ|ಮೂ| ಪಂಡಿತ್‌ ವಿಟ್ಠಲ್‌ ಭಟ್‌ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಇದೇ ಸಂದರ್ಭ ಸ್ಥಳೀಯ ಯುವ ಪ್ರತಿಭೆಗಳಾದ ಋತಿಕಾ ಶಂಕರ ಪೂಜಾರಿ, ಕೃತಿಕಾ ದಿನೇಶ್‌ ಪೂಜಾರಿ ಹಾಗೂ ಆತ್ಮೀ ಯತೀಶ್‌ ಪೂಂಜ ಅವರಿಂದ  ಭರತನಾಟ್ಯ ಪ್ರದರ್ಶನಗೊಂಡಿತು.

Advertisement

ಕೋವಿಡ್ ಮಹಾಮಾರಿಯ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸು ವುದರ ಜತೆಗೆ ಅನೇಕ ಧಾರ್ಮಿಕ ಕಾರ್ಯ ಕ್ರಮಗಳು ನಡೆದವು. ಸಂಸ್ಥೆಯ ಅಧ್ಯಕ್ಷ ಹರೀಶ್‌ ಶೆಟ್ಟಿ, ಗೌರವಾಧ್ಯಕ್ಷ ದೀವಾಕರ ರೈ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳಾದ ಮಾಧವ ಪೂಜಾರಿ, ರಾಜೇಶ್‌ ಕೊಟ್ಯಾನ್‌, ರವಿ ಶೆಟ್ಟಿ, ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ ಶೆಟ್ಟಿ ಶೃಂಗೇರಿ, ವಸಂತ ಸುವರ್ಣ, ರತ್ನಾಕರ ಸುವರ್ಣ, ನವೀನ್‌ ಭುವಾಜಿ, ಸುರೇಶ್‌ ಕರ್ಕೇರ, ಚಿತ್ರಾಪು ಲಕ್ಷ್ಮಣ್‌, ಕೃಷ್ಣ ಬಂಗೇರ, ಹೇಮಾನಂದ ದೇವಾಡಿಗ ಹಾಗೂ ಮಹಿಳಾ ವಿಭಾಗದ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಅ. 24ರಂದು ನವಮಿಯ ದಿನದಂದು ಬೆಳಗ್ಗೆ 8ರಿಂದ ದುರ್ಗಾಹೋಮ ನಡೆಯಿತು. ಪ್ರತಿವರ್ಷ ಶ್ರೀಕ್ಷೇತ್ರದಲ್ಲಿ ಒಂಬತ್ತು ದಿನಗಳ ಕಾಲ ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯುತ್ತಿದ್ದು, ಲಾಕ್‌ಡೌನ್‌ ಮಾರ್ಗಸೂಚಿಯಿಂದಾಗಿ ಈ ಬಾರಿ ಅನ್ನಸಂತರ್ಪಣೆ, ಚಂಡಿಕಾ ಹೋಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಕ್ಷಗಾನ ಬಯಲಾಟವನ್ನು ರದ್ದುಗೊಳಿಸ ಲಾಗಿತ್ತು. ಭಕ್ತರು ಸಾಮಾಜಿಕ ಅಂತರವನ್ನು ಪಾಲಿಸಿ, ಮಾಸ್ಕ್ ಧರಿಸಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು.

ತುಳು, ಕನ್ನಡಿಗರು ಸಹಿತ ಭಕ್ತರು, ಯಕ್ಷಕಲಾ ಸಂಸ್ಥೆ ಶ್ರೀ ಜಗದಂಬಾ ಮಂದಿರದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗೂ ಸರ್ವಸದಸ್ಯರು ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next