Advertisement

ದುರ್ಗಾ ದೇವಿ ಮಂಟಪ, ಶನಿ ದೇವರ ರಜತ ಮೂರ್ತಿ ಸಮರ್ಪಣೆ

04:12 PM Jan 09, 2018 | |

ಡೊಂಬಿವಲಿ: ಧಾರ್ಮಿಕ, ಸಾಂಸ್ಕೃತಿಕ  ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಹೊಂದಿರುವ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವದ ಮಂಡಳದ ಶ್ರೀ ಶನೀಶ್ವರ ದೇವರ ರಜತ ಮಹೋತ್ಸವ ವರ್ಷದ ಸಾಮೂಹಿಕ ಶ್ರೀ ಶನಿಮಹಾಪೂಜೆ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ರಜತ ಮಂಟಪ ಹಾಗೂ ಶ್ರೀ ಶನೀಶ್ವರ ದೇವರಿಗೆ ರಜತ ಮೂರ್ತಿಯ ಸಮರ್ಪಣ ಸಮಾರಂಭವು ಡೊಂಬಿವಲಿ ಪಶ್ಚಿಮದ ರೇತಿ ಭವನದ ಭರತ್‌ ಭೋಯಿರ್‌ ಸಭಾಗೃಹ ಹಾಗೂ ಮಂಡಳದ ಭಜನ ಮಂದಿರದಲ್ಲಿ  ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಸಂಜೆ ಮಂಡಳದ ಭಜನ ಮಂದಿರದಲ್ಲಿ ಶ್ರೀ ದುರ್ಗಾ ಪರಮೇಶ್ವರಿಗೆ ರಜತ ಮಂಟಪವನ್ನು ವೇದಘೋಷಗಳ ಮಧ್ಯೆ ನೂರಾರು ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಯಿತು. ಆನಂತರ ನಗರದ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ನಡೆಯಿತು.

ಜ. 6 ರಂದು ಸಮಾಜ ಸೇವಕ ಕೊಡುಗೈದಾನಿ ಭವಾನಿ ಶಿಪ್ಪಿಂಗ್‌ ಕಂಪೆನಿಯ ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ ಮತ್ತು ಪರಿವಾರದವರ  ಸೇವಾರ್ಥಕವಾಗಿ ಶ್ರೀ ಶನೀಶ್ವರ ದೇವರ ರಜತ ಮೂರ್ತಿಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮುಖಾಂತರ ಸಭಾ ಮಂಟಪಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಬಿಂಬಿಸುವ ಚೆಂಡೆ-ಕೊಂಬು, ವಾದ್ಯ, ಬಣ್ಣ ಬಣ್ಣದ ಕೊಡೆಗಳನ್ನು ಹಿಡಿದು ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು. ಅಲ್ಲದೆ ಕರಾವಳಿಯ ಯಕ್ಷಗಾನ ಕುಣಿತ, ಗೊಂಬೆ ಕುಣಿತ, ಹುಲಿವೇಷ ಇನ್ನಿತರ ವೇಷ-ಭೂಷಣಗಳು ಭಕ್ತಾದಿಗಳನ್ನು ಆಕರ್ಷಿಸಿತು.

ಡೊಂಬಿವಲಿಯ ವಿವಿಧ ಸಂಘಟನೆಗಳ ಪದಾಧಿಕಾರಿ ಗಳು, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಡೊಂಬಿವಲಿ ಪೂರ್ವ ಮತ್ತು ಪಶ್ಚಿಮ ವಿಭಾಗದ ತುಳು-ಕನ್ನಡಿಗ ಭಕ್ತಾದಿಗಳು, ಮಹಿಳೆಯರು, ಪುರುಷರು, ಪಾರಂಪಾರಿಕ ವೇಷ-ಭೂಷಣಗಳನ್ನು ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದರು.

Advertisement

ಮಂಡಳದ ವತಿಯಿಂದ ನಡೆದ ಶ್ರೀ ಸತ್ಯನಾರಾಯಣ ಮಹಾ ಪೂಜೆಯಲ್ಲಿ  ಮಂಡಳಿಯ ಅಧ್ಯಕ್ಷ ಗೋಪಾಲ್‌ ಶೆಟ್ಟಿ, ಭುಜಂಗ ಶೆಟ್ಟಿ, ಪ್ರಕಾಶ್‌ ಶೆಟ್ಟಿ ಹಾಗೂ ರೋಹಿತ್‌ ದಂಪತಿಗಳು ಸಹಕರಿಸಿದರು.  

ಇದೇ ಸಂದರ್ಭದಲ್ಲಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಗೋಪಾಲ್‌ ಕೆ. ಶೆಟ್ಟಿ ಅವರು, ಐದುವರೆ ದಶಕಗಳ ಉಜ್ವಲ ಪರಂಪರೆಯನ್ನು ಹೊಂದಿರುವ ಡೊಂಬಿವಲಿ ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರುéತ್ಸವ ಮಂಡಳವು ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗೆ ಹೆಸರಾಗಿದ್ದು, ಶ್ರದ್ಧೆ ಹಾಗೂ ಭಕ್ತಿಯಿಂದ ಮನುಷ್ಯ ಯಶಸ್ವಿಯಾಗಬಲ್ಲ ಎಂಬುವುದನ್ನು ತೋರಿಸಿಕೊಟ್ಟಿದೆ. ಮಂಡಳದ ಸಾಧನೆಗೆ ಕಾರ್ಯಕರ್ತರ ಸತತ ಪರಿಶ್ರಮ ಹಾಗೂ ಕೊಡುಗೈದಾನಿಗಳ ಸಹಕಾರ ಕಾರಣವಾಗಿದೆ ಎಂದರು.

ಮಂಡಳದ ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ ಅವರು  ನೆರೆದ ಭಕ್ತಾದಿಗಳನ್ನು ಮಹಾಪ್ರಸಾದವನ್ನಿತ್ತು ಶುಭಹಾರೈಸಿದರು. 

ಜ. 5 ರಿಂದ ಜ. 7 ರ ವರೆಗೆ ಜರಗಿದ   ಈ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು  ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.  

ಚಿತ್ರ -ವರದಿ: ಗುರುರಾಜ  ಪೊತನೀಸ

Advertisement

Udayavani is now on Telegram. Click here to join our channel and stay updated with the latest news.

Next