Advertisement

ಡೊಂಬಿವಲಿ ಶ್ರೀ ಬಸವೇಶ್ವರ ಶರಣ ಮಂಡಳ: ಬಸವೇಶ್ವರ ಜಯಂತಿ

10:22 AM Apr 25, 2018 | |

ಡೊಂಬಿವಲಿ: ನಮ್ಮ ನಡೆ- ನುಡಿಗಳು ಶುದ್ಧವಾಗಿದ್ದರೆ ಮಾತ್ರ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂದು ಬೆಳಗಾವಿ ನಾಗನೂರಿನ ಶ್ರೀ ರುದ್ರಾಕ್ಷಿ ಮಠದ ಡಾ| ಸಿದ್ಧರಾಮ ಮಹಾಸ್ವಾಮೀ ಅವರು ನುಡಿದರು.

Advertisement

ಎ. 22ರಂದು ಡೊಂಬಿವಲಿ ಪೂರ್ವದ ಶ್ರೀ ಗಣೇಶ ಮಂದಿರದ ವಕ್ರತುಂಡ ಸಭಾಗೃಹದಲ್ಲಿ ಶ್ರೀ ಬಸವೇಶ್ವರ ಶರಣ ಮಂಡಳ ಡೊಂಬಿ ವಲಿ ವತಿಯಿಂದ ಆಯೋಜಿಸ ಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರ್ಡೆಕರ ಮಂಜಪ್ಪನವರ ಪ್ರಯತ್ನ ದಿಂದಾಗಿ ಪ್ರಾರಂಭಗೊಂಡ ಬಸವೇಶ್ವರ ಜಯಂತಿ ಉತ್ಸವ ಇಂದು ವೈಚಾರಿಕವಾಗಿ ವಿಶ್ವಾ ದ್ಯಂತ ಆಚರಿಸುತ್ತಿರುವುದು ಅಭಿನಂದ ನೀಯವಾಗಿದೆ. ವಿಶ್ವಗುರು ಮಹಾನ್‌ ಸಮಾಜ ಸುಧಾರಕ ಬಸವೇಶ್ವರರ ಅನುಯಾಯಿಗಳಾದ ನಾವು ಅವರ ತತ್ವಗಳ ಚಿಂತನ ಮಂಥನ ಮಾಡಲು ಪ್ರಾರಂಭಿಸಿದ್ದು, ಇತ್ತೀಚೆಗಷ್ಟೇ ಎಂದು ಹೇಳಿದ ಶ್ರೀಗಳು, ವ್ಯಕ್ತಿ ಪರಿಶುದ್ಧªವಾಗಿದ್ದರೆ  ಮಾತ್ರ ಸಮಾಜ ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಬಸವೇಶ್ವರದ್ದಾಗಿದೆ. ನಮಗೆ ಸುಖ, ಶಾಂತಿ ಸಿಗಬೇಕಾದರೆ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದರ ಜತೆಗೆ ನಮ್ಮ ಮಕ್ಕಳಿಗೂ ಪರಿಚಯಿಸಿದರೆ ಮಕ್ಕಳು ಸುಸಂಸ್ಕೃತರಾಗುತ್ತಾರೆ. ಮುಂಬಯಿ ಉಪನಗರಗಳಲ್ಲಿಯೂ ಬಸವೇಶ್ವರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಈ ಶುಭದಿನದಂದು ಸಕಲ ಜೀವಾತ್ಮಗಳಿಗೆ ಒಳಿತನ್ನೇ ಬಯಸುವುದರ ಜತೆಗೆ ಪರಿಶುದ್ಧ ನಡೆ-ನುಡಿಯ ಸಂಕಲ್ಪ ಮಾಡೋಣ ಎಂದು ಹೇಳಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಡಾ| ಶಶಿಕಾಂತ್‌ ಪಟ್ಟಣ ಅವರು ಮಾತನಾಡಿ, ಬಸವೇಶ್ವರರು ಜಾತಿ, ಮೂಢ‌ನಂಬಿಕೆಗಳನ್ನು ತೆಗೆದು ಮಹಿಳೆಯರಿಗೆ ಸಮಾನ ಹಕ್ಕನ್ನು ಒದಗಿಸಿದ ಮಹಾನುಭಾವ. ಬಸವೇಶ್ವರರು ಯಾವುದನ್ನು ವಿರೋಧಿಸುತ್ತಿದ್ದರೊ ಅದನ್ನು ನಾವು ಅಪ್ಪಿಕೊಳ್ಳುತ್ತಿದ್ದುದು ವಿಪರ್ಯಾಸದ ಸಂಗತಿಯಾಗಿದೆ. ಲಿಂಗಾಯತ ಜಾತಿ ಅಲ್ಲ ಅದೊಂದು ಧರ್ಮ. ವೀರಶೈವ ಲಿಂಗಾಯತರು ಒಂದೇ ಆಗಲು ಸಾಧ್ಯವಿಲ್ಲ. ಅವರು ವೇದಗಳನ್ನು ಒಪ್ಪುವ ಹಾಗೂ ಯಜ್ಞಗಳನ್ನು ಮಾಡುವವರಾದರೂ ನಮಗೆ ಬಸವೇಶ್ವರರೇ ಸರ್ವಸ್ವವಾಗಿದ್ದಾರೆ. ತಾತ್ವಿಕವಾಗಿ ಬಸವೇಶ್ವರರನ್ನು ಕಾಣುವ ವ್ಯವಧಾನ ನಮ್ಮಲ್ಲಿಲ್ಲ. ಮಹಾತ್ಮಾ ಗಾಂಧಿ, ಅಂಬೇಡ್ಕರ್‌ ಅವರಿಗೆ ತಿಳಿದ ಬಸವಣ್ಣ ನಮಗೆ ತಿಳಿಯಲಿಲ್ಲ. ನಮ್ಮಲ್ಲಿಯ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಬಸವೇಶ್ವರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಗಜ್ಯೋತಿ ಬಸವೇಶ್ವರರ ಲಿಂಗಾಯತದ ಧರ್ಮ ವಿಶ್ವ ಮಾನ್ಯ ಧರ್ಮ ಎಂಬುವುದನ್ನು ಸಾಬೀತುಪಡಿಸೋಣ ಎಂದು ನುಡಿದರು.

ಇನ್ನೋರ್ವ ಅತಿಥಿ ಗದಗ ತೋಂಟ ದಾರ್ಯ ಮಠದ ಬಸವ ಕೇಂದ್ರದ ಕಾರ್ಯದರ್ಶಿ ಪ್ರೊ| ಜಿ. ಬಿ. ಹಲ್ಯಾಳ ಅವರು ಮಾತನಾಡಿ, ಲಿಂಗಾಯತರ ಮನೆಯ ಜಗುಲಿ ಇವತ್ತು ವಿವಿಧ ದೇವರುಗಳ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದ್ದು, ಲಿಂಗಾಯತ ಧರ್ಮದ ಉಪ ಜಾತಿಗಳು ಯಾವಾಗ ಇದರಿಂದ ಬೇರೆಯಾಗುವುದಿಲ್ಲವೂ ಅಲ್ಲಿಯವರೆಗೆ ಲಿಂಗಾಯತ ಧರ್ಮ ಬಲಿಷ್ಠವಾಗುವುದಿಲ್ಲ. ಲಿಂಗಾಯ ತರಿಗೆ ಇಷ್ಟಲಿಂಗವೇ ದೇವರು ಎಂದು ನುಡಿದು  ಅದರ ಪಾವಿತ್ರÂತೆ ಹಾಗೂ ಮಹತ್ವವನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಡಾ| ಶಶಿಕಾಂತ ಪಟ್ಟಣ, ಸೋಮಶೇಖರ ಮಸಳಿ ದಂಪತಿ, ಕಲಾವಿದೆ ಶ್ಯಾಮಲಾ ರಾಧೇಶ್‌ ಮೊದಲಾದವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಶರಣವಾಣಿ ಭಜನ ಮಂಡಳಿಯ ಶ್ಯಾಮಲಾ ರಾಧೇಶ್‌ ಅವರಿಂದ ಶರಣವಾಣಿ ಕಾರ್ಯಕ್ರಮ ನಡೆಯಿತು. ಜನಾರ್ದನ ಸಾಲ್ಯಾನ್‌, ಗಣೇಶ್‌ ಶೆಟ್ಟಿ  ಸಹಕರಿಸಿದರು.

Advertisement

ಸಂಸ್ಥೆಯ ಅಧ್ಯಕ್ಷ ಎಸ್‌. ಬಿ. ಕೊಂಡಗೂಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಯಾ ಕನವಳ್ಳಿ, ಪ್ರೊ| ರಾಜಶೇಖರ ಪಾಟೀಲ್‌ ಇವರು ಅತಿಥಿಗಳನ್ನು ಪರಿಚಯಿಸಿದರು. 
ಸಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ| ವಿ. ಎಸ್‌. ಅಡಿಗಲ್‌, ಮಹಾಲಿಂಗ ಹೊಸಕೋಟಿ, ಜಿ. ಬಿ. ಮಠಪತಿ, ಹೇಮಂತ ಹೊನಾರಾವ್‌, ಗೌಡಪ್ಪ ಪಾಟೀಲ್‌ ಮೊದಲಾದವರು ಉಪಸ್ಥಿತರಿದ್ದರು. 
 
ಚಿತ್ರ-ವರದಿ: ಗುರುರಾಜ ಪೊತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next